ನಾಯಿಗಳ ಮಾರಾಟ ನಿಯಂತ್ರಣಕ್ಕೆ ನಿಯಮ
Update: 2017-01-11 16:52 IST
ಹೊಸದಿಲ್ಲಿ,ಜ.11: ಮಾರಾಟಕ್ಕಾಗಿ ನಾಯಿ ಸಾಕುವುದು, ನಾಯಿ ಮರಿ ಮಾರಾಟ ನಿಯಂತ್ರಿಸಲು ನಿಯಮ ರೂಪಿಸಲಾಗುತ್ತಿದೆ. ಪ್ರಾಣಿಗಳ ವಿರುದ್ಧ ಕ್ರೌರ್ಯ ತಡೆಯಲು ಮತ್ತು ಸಂರಕ್ಷಣೆಗೆ ಹೊಸ ನಿಯಮ ರೂಪಿಸಲಾಗುತ್ತಿದೆ. ನಾಯಿ ಮಾರುವ ವ್ಯಕ್ತಿ ಹಾಗೂ ಸಂಸ್ಥೆಗಳು ನಿಯಮದ ಅಡಿಯಲ್ಲಿ ಬರಲಿದೆ.
ಆದರೆ ಅದರಲ್ಲಿ ಕೇರಳ ಮುಂತಾದ ರಾಜ್ಯಗಳಲ್ಲಿ ಬೀದಿ ನಾಯಿ ಹಾವಳಿಯನ್ನು ತಡೆಯುವುದಕ್ಕೆ ಯಾವ ಉಪಾಯವೂ ಇಲ್ಲ. ಪ್ರಾಣಿಗಳ ವಿರುದ್ಧ ಕ್ರೌರ್ಯವನ್ನು ತಡೆಯಲು(ನಾಯಿ ಸಾಕುವುದು, ಮಾರುವುದು) ನಿಯಮ 2016 ಇದನ್ನು ಸಾರ್ವಜನಿಕ ಅಭಿಪ್ರಾಯ ವ್ಯಕ್ತಪಡಿಸಲು ವೆಬ್ ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಬೀದಿ ನಾಯಿಯ ಕಾಟ ತಡೆಯಲು ಸೂಚನೆಗಳು ಲಭಿಸಿದರೆ ಅದ್ನು ಪರಿಶೀಲಿಸಲಾಗುವುದು ಎಂದು ಕೇಂದ್ರ ಅರಣ್ಯ ಸಚಿವ ಅನಿಲ್ ದವೆ ಹೇಳಿದ್ದಾರೆ ಎಂದು ವರದಿಯಾಗಿದೆ.