ಕೈದಿಗಳ ವಿಚಾರಣೆಗೆ ಚಿತ್ರಹಿಂಸೆ ಬೇಡ :ಟ್ರಂಪ್‌ಗೆ ನಿವೃತ್ತ ಸೇನಾಧಿಕಾರಿಗಳ ಪತ್ರ

Update: 2017-01-11 15:26 GMT

ವಾಶಿಂಗ್ಟನ್, ಜ. 11: ಕೈದಿಗಳ ವಿಚಾರಣೆಯ ವೇಳೆ ವಾಟರ್‌ಬೋರ್ಡಿಂಗ್ ಮುಂತಾದ ಚಿತ್ರಹಿಂಸೆಯ ವಿಧಾನಗಳನ್ನು ಅನುಸರಿಸದಂತೆ ಹಲವಾರು ನಿವೃತ್ತ ಉನ್ನತ ಸೇನಾಧಿಕಾರಿಗಳು ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಪತ್ರ ಬರೆದಿದ್ದಾರೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ಮಂಗಳವಾರ ವರದಿ ಮಾಡಿದೆ.

‘‘ವಾಟರ್‌ಬೋರ್ಡಿಂಗ್ ಸರಿಯಾಗಿದೆ, ಆದರೆ, ಅದು ಸಾಕಷ್ಟು ಕಠಿಣವಾಗಿಲ್ಲ’’ ಎಂಬುದಾಗಿ ತನ್ನ ಚುನಾವಣಾ ಪ್ರಚಾರದ ವೇಳೆ ಟ್ರಂಪ್ ಹೇಳಿದ್ದರು. ತಾನು ವಾಟರ್‌ಬೋರ್ಡ್‌ಗಿಂತಲೂ ಕಠಿಣ ಹಿಂಸಾ ವಿಧಾನಗಳನ್ನು ಮರಳಿ ತರುವುದಾಗಿ ಅವರು ಘೋಷಿಸಿದ್ದರು.

ಇಂಥ ಮಾತುಗಳಿಂದ ತಮಗೆ ಕಳವಳವವಾಗಿದೆ ಎಂಬುದಾಗಿ ಜನವರಿ 6ರ ಪತ್ರದಲ್ಲಿ ಅಮೆರಿಕ ಸೇನೆಯ 176 ನಿವೃತ್ತ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News