ಫೆ.21ರಂದು ಮುಂಬೈ, ಥಾಣೆ, ಪುಣೆ ನಗರಪಾಲಿಕೆ ಚುನಾವಣೆ

Update: 2017-01-11 16:43 GMT

ಮುಂಬೈ, ಜ.11: ಮುಂಬೈ, ಥಾಣೆ, ಪುಣೆ ಸೇರಿದಂತೆ ಮಹಾರಾಷ್ಟ್ರದ 10 ನಗರಪಾಲಿಕೆಗಳ ಚುನಾವಣೆ ಫೆ.21ರಂದು ನಡೆಯಲಿದ್ದು ಇಂದಿನಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿದೆ ಎಂದು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ.

ಫೆ.23ರಂದು ಮತ ಎಣಿಕೆ ನಡೆಯಲಿದೆ. ಅಲ್ಲದೆ ಫೆ.16 ಮತ್ತು 21ರಂದು ಎರಡು ಹಂತದಲ್ಲಿ 25 ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯುಕ್ತ ಜೆ.ಎಸ್.ಸಹಾರಿಯಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News