ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಸಮಸ್ಯೆಯಿಲ್ಲ: ಲೋಧಾ ಸಮಿತಿ ಸ್ಪಷ್ಟನೆ

Update: 2017-01-11 18:06 GMT

ಹೊಸದಿಲ್ಲಿ, ಜ.11: ಬಿಸಿಸಿಐ ಆಶ್ರಯದಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಲು ಯಾವುದೇ ಸಮಸ್ಯೆಯಿಲ್ಲ ಎಂದು ಸುಪ್ರೀಂಕೋರ್ಟ್‌ನಿಂದ ನೇಮಿಸಲ್ಪಟ್ಟ ಲೋಧಾ ಸಮಿತಿ ಬುಧವಾರ ಸ್ಪಷ್ಟಪಡಿಸಿದೆ.

  ಕ್ರಿಕೆಟ್ ಪಂದ್ಯಗಳು ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಡೆಯಲಿದೆ ಎಂದು ಎಲ್ಲ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಂದ ಆಶ್ವಾಸನೆ ಪತ್ರಗಳನ್ನು ಪಡೆಯುವ ಅಗತ್ಯವಿದೆ ಎಂದು ಲೋಧಾ ಸಮಿತಿ ಬಿಸಿಸಿಐ ಸಿಇಒ ರಾಹುಲ್ ಜೊಹ್ರಿಗೆ ತಿಳಿಸಿದೆ.

ಬಿಸಿಸಿಐನ ಅನರ್ಹಗೊಂಡ ಅಧಿಕಾರಿಗಳು ಪಂದ್ಯಗಳಿಗೆ ಅಡ್ಡಿಪಡಿಸುವುದು, ಸುಧಾರಣೆಗಳು ಹಾಗೂ ಶಿಫಾರಸುಗಳನ್ನು ಜಾರಿಗೆ ತರಲು ಹೊಸ ಆಡಳಿತ ಮಂಡಳಿಗೆ ಅಡ್ಡಿಪಡಿಸುವ ಪ್ರಯತ್ನಕ್ಕೆ ತಡೆ ಹೇರಲು ಈ ಹೆಜ್ಜೆ ಇಡಲಾಗುತ್ತಿದೆ ಎಂದು ಸಮಿತಿ ತಿಳಿಸಿದೆ.

ಭಾರತದ ಮಾಜಿ ಮುಖ್ಯ ಜಸ್ಟಿಸ್‌ಗಳಾದ ಆರ್‌ಎಂ ಲೋಧಾ, ಮಾಜಿ ಜಸ್ಟೀಸ್‌ಗಳಾದ ಅಶೋನ್ ಭಾನ್ ಹಾಗೂ ಆರ್‌ವಿ ರವೀಂದ್ರನ್ ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿ ಹೊಸದಿಲ್ಲಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ನಿರ್ಧರಿಸಿದ್ದಾರೆ.

 ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಹಾಗೂ ರಾಜಸ್ಥಾನ ಕ್ರಿಕೆಟ್ ಸಂಸ್ಥೆ ವಿಷಯದಲ್ಲಿ ಮಧ್ಯಪ್ರವೇಶಿಸುವುದಿಲ್ಲವೆಂದು ಸಮಿತಿ ಹೇಳಿದೆ. ಈ ಎರಡು ಸಂಸ್ಥೆಗಳ ಪ್ರಕರಣ ನ್ಯಾಯಾಲಯದಲ್ಲಿರುವುದು ಇದಕ್ಕೆ ಕಾರಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News