ಅನ್ನ ನೀಡುವ ಕೃಷಿಕ ದೇಶದ ನಾಯಕ: ಡಾ.ಹೆಗ್ಗಡೆ

Update: 2017-01-11 18:32 GMT

ಉಪ್ಪಿನಂಗಡಿ, ಜ.11: ದೇಶಕ್ಕೆ ಅನ್ನ ನೀಡುವ ಕೃಷಿಕ ಆರಾಧನೆಗೆ ಅರ್ಹನಾಗಿದ್ದು, ಆತನೇ ಈ ದೇಶದ ನಾಯಕ. ಆದ್ದರಿಂದ ಕೃಷಿಕನ ಬಗ್ಗೆ ಕಡೆಗಣನೆಬೇಡ. ಪ್ರಕೃತಿ ಕೊಟ್ಟಿದ್ದನ್ನು ಭವಿಷ್ಯತ್ತಿಗೆ ಕಾಪಿಡುವ ಹೊಣೆಗಾರಿಕೆಯನ್ನು ಪ್ರತಿಯೋರ್ವರು ನಿರ್ವಹಿಸಿದಾಗ ಮಾತ್ರ ಮುಂದಿನ ಪೀಳಿಗೆ ಉತ್ತಮವಾಗಿ ಜೀವಿಸಲು ಸಾಧ್ಯ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು.

 ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಪುತ್ತೂರು ತಾಲೂಕು, ಕೃಷಿ ಉತ್ಸವ ವ್ಯವಸ್ಥಾಪನಾ ಸಮಿತಿ ಪುತ್ತೂರು ತಾಲೂಕು, ಪ್ರಗತಿ ಬಂಧು-ಸ್ವಸಹಾಯ ಸಂಘಗಳ ಒಕ್ಕೂಟ, ಸರಕಾರಿ ಇಲಾಖೆಗಳು ಹಾಗೂ ಸ್ಥಳೀಯ ಸಂಘ ಸಂಸ್ಥೆ ಇವುಗಳ ಸಂಯುಕ್ತಾಶ್ರಯದಲ್ಲಿ ನೆಲ್ಯಾಡಿಯ ಗಾಂ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಕೃಷಿ ಉತ್ಸವ-2017ರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿದ್ದ ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಎಂ. ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ, ಬೆಳ್ತಂಗಡಿ ಧರ್ಮಪ್ರಾಂತದ ಪರಿಪಾಲನಾ ಕೇಂದ್ರ ಮತ್ತು ಧರ್ಮ ಉಪದೇಶ ಕೇಂದ್ರದ ನಿರ್ದೇಶಕ ಜೋಸೆಪ್ ಮಟ್ಟಂ, ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿದರು.

ಕೃಷಿ ಉತ್ಸವ ವ್ಯವಸ್ಥಾಪನಾ ಸಮಿತಿಯ ಗೌರವಾಧ್ಯಕ್ಷ ಧನ್ಯಕುಮಾರ್ ರೈ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪುತ್ತೂರು ತಾಲೂಕು ಅಧ್ಯಕ್ಷ ರಾಮಣ್ಣ ಗೌಡ, ವಿಚಾರಗೋಷ್ಠಿ ಸಂಚಾಲಕ ಅಬ್ರಾಹಂ ವರ್ಗೀಸ್, ಉಡುಪಿ ಕರಾವಳಿ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ಕೊಡಗು ಜಿಲ್ಲಾ ನಿರ್ದೇಶಕ ಸೀತಾರಾಮ್ ಶೆಟ್ಟಿ, ಜನಜಾಗೃತಿ ವೇದಿಕೆ ಪುತ್ತೂರು ತಾಲೂಕು ಅಧ್ಯಕ್ಷ ಪದ್ಮನಾಭ ಶೆಟ್ಟಿ, ಪ್ರಾದೇಶಿಕ ನಿರ್ದೇಶಕ ಬೂದಪ್ಪ ಗೌಡ ಉಪಸ್ಥಿತರಿದ್ದರು.

 ಇದೇ ಸಂದರ್ಭ ಪನೋಡಾ ಬೊರ್ಚ ತುಳು ಚಲನಚಿತ್ರದ ನಾಯಕಿ ನಟಿ ಶಕುಂತಳಾ ಆಚಾರ್ಯ, ನೆಲ್ಯಾಡಿ ನಮ್ಮ ಕಲಾವಿದೆರ್ ನಾಟಕ ತಂಡದ ದಯಾನಂದ ಆಚಾರ್ಯ, ವೇದಿಕೆ ನಿರ್ಮಿಸಿದ ದಿನೇಶ್ ಮಾಸ್ಟರ್ ಬಿಳಿನೆಲೆ ಅವರನ್ನು ಸನ್ಮಾನಿಸಲಾಯಿತು.

  ಕೃಷಿ ಉತ್ಸವ ವ್ಯವಸ್ಥಾಪನಾ ಸಮಿತಿಯ ಕಾರ್ಯಾಧ್ಯಕ್ಷ ಬಾಲಕೃಷ್ಣ ಬಾಣಜಾಲ್ ಸ್ವಾಗತಿಸಿದರು. ಯೋಜನಾಕಾರಿ ಧರ್ಣಪ್ಪ ಮೂಲ್ಯ ವಂದಿಸಿದರು. ನೆಲ್ಯಾಡಿ ಸಂತ ಜಾರ್ಜ್ ಪಪೂ ಕಾಲೇಜಿನ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ರವೀಂದ್ರ ಡಿ. ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News