ಜ.14-15: ವಿಕಾಸ್‌ಕಾಲೇಜಿನಲ್ಲಿ ಕೋಚಿಂಗ್ ಕ್ಲಾಸ್

Update: 2017-01-11 18:34 GMT

 ಮಂಗಳೂರು, ಜ.11: ಎಸೆಸೆಲ್ಸಿ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ 'ನೀಟ್' ಮತ್ತು ಸಿಇಟಿ ಪರೀಕ್ಷೆಗೆ ಪೂರಕವಾಗಿ ವಿಕಾಸ್ ಪ.ಪೂ. ಕಾಲೇಜಿನಲ್ಲಿ ಜ.14, 15ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಉಚಿತ ಕೋಚಿಂಗ್ ಶಿಬಿರ ನಡೆಸಲಾಗುವುದು ಎಂದು ಮಾಜಿ ಸಚಿವ ಹಾಗೂ ವಿಕಾಸ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಕೃಷ್ಣ ಜೆ.ಪಾಲೆಮಾರ್ ತಿಳಿಸಿದ್ದಾರೆ.

 ಬುಧವಾರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗಣಿತ ಮತ್ತು ವಿಜ್ಞಾನದಲ್ಲಿ ಹೆಚ್ಚು ಅಂಕ ಗಳಿಸಲು ಸಾಧ್ಯವಾಗುವಂತೆ ಎಸಿಇ ಕೋಚಿಂಗ್‌ನ ನುರಿತ ಬೋಧನಾ ವರ್ಗವು ತರಬೇತಿ ನೀಡಲಿದೆ. ಪ್ರತೀ ವಿದ್ಯಾರ್ಥಿಗಳಿಗೆ ಎರಡು ಸೆಟ್ ಮಾಡೆಲ್ ಪೇಪರ್, ಕೆರಿಯರ್ ಪಾಥ್ ಚಾರ್ಟ್,ಸ್ಕೋರ್, ಈವನ್ ಮೋರ್ ಪುಸ್ತಕ ನೀಡಲಾಗುವುದು ಎಂದರು.

ಇದಲ್ಲದೆ ಪರೀಕ್ಷಾ ಭಯವನ್ನು ಹೋಗಲಾಡಿಸಲು ಸಲಹೆಗಳು ಮತ್ತು ವಿದ್ಯಾರ್ಥಿಗಳ ಸಂಶಯ ನಿವಾರಣೆಗೆ ವಾರಂತ್ಯದಲ್ಲಿ ವಿಕಾಸ್ ಬೋಧನಾ ವರ್ಗ ನೀಡಲು ಬದ್ಧವಾಗಿದೆ. ಊಟ ಮತ್ತು ಉಪಾಹಾರ ಉಚಿತವಾಗಿರುತ್ತದೆ. ಹೆಸರು ನೋಂದಾಯಿಸಲು 0824-688813 ಅಥವಾ 2210300ನ್ನು ಜ.13ರೊಳಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.

ವಿದ್ಯಾರ್ಥಿಗಳಿಗೆ ನೆರವು: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಬೋರ್ಡ್ ಪರೀಕ್ಷೆ ಮುಗಿದ ತಕ್ಷಣ ಮೆರಿಟ್ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅಧ್ಯಯನ ಸಾಮಗ್ರಿಗಳನ್ನು ವಿತರಿಸಲಾಗುವುದು. ಮಾ.29ರಿಂದ ಎ.20ರವರೆಗೆ ಪ್ರತಿದಿನ ಬೆಳಗ್ಗೆ 9ರಿಂದ ಸಂಜೆ 6:30ರವರೆಗೆ ಈ ಕೋಚಿಂಗ್ ಕ್ಲಾಸ್ ನಡೆಸಲಾಗುವುದು. ವಿದ್ಯಾರ್ಥಿ ವೇತನ ಪಡೆಯಲು ಎಸೆಸೆಲ್ಸಿಯಲ್ಲಿ ಶೇ.85 ಅಂಕಗಳನ್ನು ಗಳಿಸಿರಬೇಕು ಎಂದು ಪಾಲೆಮಾರ್ ನುಡಿದರು.

ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಸಲಹೆಗಾರ ಡಾ.ಅನಂತಪ್ರಭು, ಪ್ರಾಂಶುಪಾಲ ರಾಜರಾಮ ರಾವ್, ಕಾರ್ಯಕ್ರಮದ ಸಂಯೋಜಕ ಪ್ರಶಾಂತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News