ಬಂಟ್ವಾಳ: 25 ಅಭ್ಯರ್ಥಿಗಳು ಕಣದಲ್ಲಿ

Update: 2017-01-11 18:36 GMT

 ಬಂಟ್ವಾಳ, ಜ. 11: ನ್ಯಾಯಾಲಯದ ತಡೆ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಗೆ ಜ.12ರಂದು ಚುನಾವಣೆ ನಡೆಯಲಿದೆ. ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸಂಬಂಧಿಸಿದಂತೆ 12 ಸ್ಥಾನಗಳಿಗೆ 25 ಅಭ್ಯರ್ಥಿಗಳು ಕಣದಲ್ಲಿದ್ದು ತಮ್ಮ ಅದೃಷ್ಟವನ್ನು ಪರೀಕ್ಷಿಸಲಿದ್ದಾರೆ. ಚುನಾವಣೆಯ ಹಿನ್ನೆಲೆಯಲ್ಲಿ ಬುಧವಾರ ಬಿ.ಸಿ.ರೋಡ್‌ನ ಮೊಡಂಕಾಪು ಇನ್ಫೆಂಟ್ ಜೀಸೆಸ್ ಶಾಲೆಯಲ್ಲಿ ಮಸ್ಟರಿಂಗ್ ನಡೆಯಿತು. ಬಳಿಕ ಆಯಾಯ ಮತಗಟ್ಟೆಗೆ ಸಂಬಂಧಿಸಿದಂತೆ ನಿಯೋಜಿಸಲ್ಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ ಪೆಟ್ಟಿಗೆಯೊಂದಿಗೆ ತೆರಳಿದರು. ಈ ಚುನಾವಣೆಯು ಪಕ್ಷದ ಚಿಹ್ನೆಯಡಿ ನಡೆಯುತ್ತಿಲ್ಲವಾದರೂ ಎಲ್ಲವೂ ರಾಜಕೀಯ ಪಕ್ಷಗಳ ಮುಖಂಡರ ಕಾರ್ಯತಂತ್ರಗಳ ಹಾಗೂ ಪೂರ್ತಿ ಸಹಕಾರದೊಂದಿಗೆ ನಡೆಯುತ್ತಿದೆ. ಬಂಟ್ವಾಳ ಎಪಿಎಂಸಿಯಲ್ಲಿ ಕಳೆದ ಬಾರಿ ಬಿಜೆಪಿ 8 ಸದಸ್ಯರ ಬಲದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಕಾಂಗ್ರೆಸ್ ನಾಲ್ವರು ಸದಸ್ಯರನ್ನಷ್ಟೇ ಹೊಂದಿತ್ತು. ಈ ಬಾರಿ ಬಿಜೆಪಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಪ್ರಯತ್ನಪಟ್ಟರೆ, ಕಾಂಗ್ರೆಸ್ ಎಪಿಎಂಸಿಯನ್ನು ತನ್ನ ಕೈವಶ ಮಾಡಿಕೊಳ್ಳಲು ಯತ್ನಿಸಿದೆ. ಜ.14ರಂದು ಅಭ್ಯರ್ಥಿಗಳ ಹಣೆಬರಹ ಹೊರಬೀಳಲಿದೆ. ಬಂಟ್ವಾಳ ಎಪಿಎಂಸಿಯ ಮತ ಎಣಿಕೆ ಮೊಡಂಕಾಪು ಇನ್ಫೆಂಟ್ ಜೀಸಸ್ ಕಾಲೇಜಿನಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News