ಮಾಲಿನ್ಯ ಪತ್ತೆಯಲ್ಲಿ ವಂಚನೆ: ತಪ್ಪು ಒಪ್ಪಿಕೊಂಡ ಫೊಕ್ಸ್‌ವ್ಯಾಗನ್ ಗೆ ಹಾಕಿದ ದಂಡದ ಮೊತ್ತ ಕೇಳಿದರೆ ತಲೆತಿರುಗಲಿದೆ !
Update: 2017-01-12 21:06 IST
ವಾಶಿಂಗ್ಟನ್, ಜ. 12: ವಾಯುಮಾಲಿನ್ಯ ತಪಾಸಣೆಯಲ್ಲಿ ವಂಚನೆಗೈದ ಪ್ರಕರಣದಲ್ಲಿ ಅಮೆರಿಕದ ನ್ಯಾಯಾಲಯವೊಂದು ಫೊಕ್ಸ್‌ವ್ಯಾಗನ್ ಕಂಪೆನಿಯ ಆರು ಉನ್ನತ ಮಟ್ಟದ ಅಧಿಕಾರಿಗಳಿಗೆ ಛೀಮಾರಿ ಹಾಕಿದೆ. ಅದೇ ವೇಳೆ, ಜರ್ಮನಿಯ ಕಾರು ತಯಾರಕ ಕಂಪೆನಿಯು ತನ್ನ ತಪ್ಪನ್ನು ಒಪ್ಪಿಕೊಂಡು ದಾಖಲೆಯ 4.3 ಬಿಲಿಯ ಡಾಲರ್ (ಸುಮಾರು 29,264 ಕೋಟಿ ರೂಪಾಯಿ) ದಂಡವನ್ನು ಪಾವತಿಸಲು ಒಪ್ಪಿಕೊಂಡಿದೆ.
ಕಂಪೆನಿಯು ನಡೆಸಿದ ವಂಚನೆ ಹಾಗೂ ಅದನ್ನು ಮುಚ್ಚಿ ಹಾಕಲು ಅದು ಮಾಡಿದ ತಂತ್ರಗಳನ್ನೊಳಗೊಂಡ ವಿವರವಾದ ವರದಿಯನ್ನು ಕಾನೂನು ಸಚಿವಾಲಯ ಬಿಡುಗಡೆ ಮಾಡಿದೆ.
ಸಾಕ್ಷ ನಾಶ ಮಾಡುವಲ್ಲಿ ಫೊಕ್ಸ್‌ವ್ಯಾಗನ್ನ ಕನಿಷ್ಠ 40 ಉದ್ಯೋಗಿಗಳು ಶಾಮೀಲಾಗಿದ್ದಾರೆ ಎಂದು ಸರಕಾರ ಹೇಳಿದೆ.