×
Ad

ಸುಶ್ಮಾ ಎಚ್ಚರಿಕೆಗೆ ಮಣಿದು ತ್ರಿವರ್ಣ ಧ್ವಜದ ಡೋರ್‌ಮ್ಯಾಟ್ ಮಾರಾಟ ಕೈ ಬಿಟ್ಟ ಅಮೆಝಾನ್

Update: 2017-01-13 00:01 IST

ವಾಷಿಂಗ್ಟನ್,ಜ.12: ಭಾರತದ ತ್ರಿವರ್ಣ ಧ್ವಜವನ್ನು ಹೋಲುವ ಡೋರ್‌ಮ್ಯಾಟ್ ಗಳನ್ನು ಮಾರಾಟಕ್ಕಿಟಿದ್ದ ಆನ್‌ಲೈನ್ ಮಳಿಗೆ ಅಮೆಝಾನ್ ಭಾರತದಿಂದ ತೀವ್ರ ಪ್ರತಿಭಟನೆಯ ಬಳಿಕ ಎಚ್ಚೆತ್ತುಕೊಂಡಿದೆ. ತನ್ನ ಕೆನೆಡಿಯನ್ ವೆಬ್‌ಸೈಟ್‌ನ ಮಾರಾಟ ವಸ್ತುಗಳ ಪಟ್ಟಿಯಿಂದ ಈ ಡೋರ್‌ಮ್ಯಾಟ್‌ಗಳನ್ನು ತೆಗೆದುಹಾಕಿದೆ.

ಈ ಡೋರ್‌ಮ್ಯಾಟ್‌ಗಳು ಸಂಸ್ಥೆಯ ವೆಬ್‌ಸೈಟ್‌ಗಳಲ್ಲಿ ಲಭ್ಯವಿಲ್ಲ ಎಂದು ಸಿಯಾಟಲ್‌ನಲ್ಲಿರುವ ಅಮೆಝಾನ್‌ನ ಕೇಂದ್ರ ಕಚೇರಿಯ ವಕ್ತಾರರು ತಿಳಿಸಿದರು.
ಭಾರತದ ತ್ರಿವರ್ಣ ಧ್ವಜವನ್ನು ಚಿತ್ರಿಸಿದ ಡೋರ್‌ಮ್ಯಾಟ್‌ಗಳ ಮಾರಾಟಕ್ಕೆ ಬಲವಾದ ಆಕ್ಷೇಪವನ್ನು ವ್ಯಕ್ತಪಪಡಿಸಿದ್ದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅವರು, ಈ ಉತ್ಪನ್ನಗಳನ್ನು ಹಿಂದೆಗೆದುಕೊಳ್ಳುವಂತೆ ಮತ್ತು ಬೇಷರತ್ ಕ್ಷಮೆ ಯಾಚಿಸುವಂತೆ ಬುಧವಾರ ಅಮೆಝಾನ್‌ಗೆ ತಾಕೀತು ಮಾಡಿದ್ದರು. ಇಲ್ಲದಿದ್ದಲ್ಲಿ ಅಮೆಝಾನ್‌ನ ಯಾವುದೇ ಅಧಿಕಾರಿಗೆ ಭಾರತದ ವೀಸಾ ಮಂಜೂರು ಮಾಡಲಾಗುವುದಿಲ್ಲ ಮತ್ತು ಈಗಾಗಲೇ ಮಂಜೂರಾಗಿರುವ ವೀಸಾಗಳನ್ನು ರದ್ದುಗೊಳಿಸಲಾಗುವುದು ಎಂದು ಎಚ್ಚರಿಕೆಯನ್ನೂ ನೀಡಿದ್ದರು.
ಅಮೆಝಾನ್ ಕೆನಡಾ ಜೊತೆ ಈ ವಿಷಯವನ್ನು ಕೈಗೆತ್ತಿಕೊಳ್ಳುವಂತೆ ಅವರು ಭಾರತೀಯ ರಾಯಭಾರಿ ಕಚೇರಿಗೂ ನಿರ್ದೇಶ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News