ಮಥುರಾ: 10 ದಿನಗಳಲ್ಲಿ 73 ಲಕ್ಷ ರೂ. ನಗದು ವಶ

Update: 2017-01-14 14:17 GMT

ಮಥುರಾ,ಜ.13: ಉತ್ತರಪ್ರದೇಶ ವಿಧಾನಸಭಾ ಚುನಾವಣಾ ದಿನಾಂಕಗಳನ್ನು ಘೋಷಿಸಿದ ಬಳಿಕ ಮಾದರಿ ನೀತಿ ಸಂಹಿಯು ಜಾರಿಗೆ ಬಂದ 10 ದಿನಗಳಿಂದೀಚೆಗೆ ಮಥುರಾ ಜಿಲ್ಲೆಯಲ್ಲಿ 73 ಲಕ್ಷ ರೂ. ನಗದು, 3500 ಲೀಟರ್ ಮದ್ಯ ಹಾಗೂ 7.5 ಕೆ.ಜಿ. ಅಮಲುದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.

 ಬಿಎಸ್‌ಪಿ ನಾಯಕ ಸತ್ಯಪ್ರಕಾಶ್ ಕರ್ದಮ್ ಅವರಿಗೆ ಸೇರಿದ್ದೆನ್ನಲಾದ ವಾಹನದಲ್ಲಿ ಸಾಗಿಸಲಾಗುತ್ತಿದ್ದ 5 ಲಕ್ಷ ರೂ.ನಗದನ್ನು ವಶಪಡಿಸಿಕೊಳ್ಳಲಾಗಿದೆಯೆಂದು ಮಥುರಾ ಜಿಲ್ಲಾ ಚುನಾವಣಾ ಕಣ್ಗಾವಲು ಸಮಿತಿಯ ಉಸ್ತುವಾರಿ ರವೀಂದ್ರ ಕುಮಾರ್ ಶನಿವಾರ ತಿಳಿಸಿದ್ದಾರೆ.

 ಈ ಮಧ್ಯೆ ಜಿಲ್ಲೆಯಲ್ಲಿ ವಾಹನಗಳ ತಪಾಸಣೆಯ ವೇಳೆ ಪ್ರತ್ಯೇಕ ಘಟನೆಗಳಲ್ಲಿ ನಾಲ್ವರಿಂದ 5 ಲಕ್ಷ ರೂ.ಗೂ ಅಧಿಕ ಮೊತ್ತವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆಯೆಂದು ಅವರು ಹೇಳಿದ್ದಾರೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಖಾತರಿಪಡಿಸುವ ಉದ್ದೇಶದಿಂದ 2300 ಮಂದಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಎಂದವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News