×
Ad

ಪರಮಾಣು ಯುದ್ಧಕ್ಕೆ ಕಾರಣವಾಗುವ ಕ್ರಮಗಳನ್ನು ಪಾಕ್ ತೆಗೆದುಕೊಂಡಿತ್ತು : ಅಮೆರಿಕದ ಉಪಾಧ್ಯಕ್ಷ ಜೋ ಬೈಡನ್

Update: 2017-01-14 20:33 IST

ವಾಶಿಂಗ್ಟನ್, ಜ. 14: ಪಾಕಿಸ್ತಾನ ಮತ್ತು ಇತರ ಕೆಲವು ದೇಶಗಳು ‘ಪ್ರತಿಕೂಲ ಪರಿಣಾಮ’ಕ್ಕೆ ಆಸ್ಪದವಾಗುವ ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಇದು ಪ್ರಾದೇಶಿಕ ಸಂಘರ್ಷದಲ್ಲಿ ಅಣ್ವಸ್ತ್ರ ಬಳಕೆಯ ಅಪಾಯವನ್ನಷ್ಟೇ ಹೆಚ್ಚಿಸುತ್ತದೆ ಎಂದು ಅಮೆರಿಕದ ಉಪಾಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.‘‘ಒಂದೇ ಒಂದು ಪರಮಾಣು ಬಾಂಬ್ ಭಾರೀ ವಿನಾಶವನ್ನು ಸೃಷ್ಟಿಸಬಲ್ಲದು’’ ಎಂದು ಬೈಡನ್ ಹೇಳಿದರು.

ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಪರಮಾಣು ಅಸ್ತ್ತ್ರಗಳಲ್ಲಿ ಬಳಕೆ ಮಾಡಬಹುದಾದ ಸಾಮಗ್ರಿಗಳ ಪೂರೈಕೆಯನ್ನು ಕಡಿಮೆಗೊಳಿಸಲು ಒಬಾಮ ಆಡಳಿತ ತೆಗೆದುಕೊಂಡ ಕ್ರಮಗಳನ್ನು ಅವರು ವಿವರಿಸಿದರು.

‘‘ಉತ್ತರ ಕೊರಿಯ ಮಾತ್ರವಲ್ಲ, ರಶ್ಯ, ಪಾಕಿಸ್ತಾನ ಮತ್ತು ಇತರ ಹಲವು ದೇಶಗಳು ಪ್ರತಿಕೂಲ ಪರಿಣಾಮಗಳಿಗೆ ಆಸ್ಪದವಾಗಬಲ್ಲ ಕ್ರಮಗಳನ್ನು ತೆಗೆದುಕೊಂಡಿವೆ. ಇವುಗಳು ಯುರೋಪ್, ದಕ್ಷಿಣ ಏಶ್ಯ ಅಥವಾ ಪೂರ್ವ ಏಶ್ಯಗಳ ಪ್ರಾದೇಶಿಕ ಸಂಘರ್ಷಗಳಲ್ಲಿ ಪರಮಾಣು ಅಸ್ತ್ರಗಳನ್ನು ಬಳಸಬಹುದಾದ ಅಪಾಯವನ್ನು ಹೆಚ್ಚಿಸಿದ್ದವು’’ ಎಂದು ಪರಮಾಣು ಭದ್ರತೆಯ ಬಗ್ಗೆ ಮಾತನಾಡಿದ ಅವರು ಹೇಳಿದರು.

ಮುಂದಿನ ಆಡಳಿತ ಈ ವಿಷಯಗಳನ್ನು ಸೂಕ್ತವಾಗಿ ನಿಭಾಯಿಸಬೇಕಾಗಿದೆ ಎಂದು ಹೇಳಿದ ಅವರು, ನಮ್ಮ ಜಗತ್ತಿನಲ್ಲಿ ಪರಮಾಣು ಅಸ್ತ್ರಗಳ ಪಾತ್ರವನ್ನು ಕಡಿಮೆಗೊಳಿಸಲು ಜಾಗತಿಕ ಒಮ್ಮತವನ್ನು ನಿರ್ಮಿಸುವ ಕೆಲಸ ಮುಂದುವರಿಯಬೇಕಾಗಿದೆ ಎಂದು ಅಮೆರಿಕದ ಉಪಾಧ್ಯಕ್ಷ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News