×
Ad

ಬಾಂಗ್ಲಾ ಕೆಫೆ ದಾಳಿ: ಇನ್ನೋರ್ವ ಸೂತ್ರಧಾರನ ಬಂಧನ

Update: 2017-01-14 20:43 IST

ಢಾಕಾ, ಜ. 14: ಕಳೆದ ವರ್ಷ ಢಾಕಾ ಕೆಫೆಯೊಂದರ ಮೇಲೆ ಭಯೋತ್ಪಾದಕ ದಾಳಿ ನಡೆಸಿದ್ದ ‘ಸೂತ್ರಧಾರಿಗಳ’ ಪೈಕಿ ಓರ್ವನನ್ನು ಬಂಧಿಸಿರುವುದಾಗಿ ಬಾಂಗ್ಲಾದೇಶ ಪೊಲೀಸರು ಶನಿವಾರ ಹೇಳಿದ್ದಾರೆ.

ಕಳೆದ ವರ್ಷದ ಜುಲೈ ಒಂದರಂದು ಭಯೋತ್ಪಾದಕರು ಪ್ರತಿಷ್ಠಿತ ಕೆಫೆಗೆ ನುಗ್ಗಿ 22 ಮಂದಿಯನ್ನು ಕೊಂದಿದ್ದರು.

ರಾಜಧಾನಿ ಢಾಕಾದಿಂದ ಸುಮಾರು 120 ಕಿಲೋಮೀಟರ್ ದೂರದಲ್ಲಿರುವ ಪಟ್ಟಣ ಎಲೆಂಗದಲ್ಲಿ ಭಯೋತ್ಪಾದಕ ನಿಗ್ರಹ ಪಡೆಗಳು ಶುಕ್ರವಾರ ರಾತ್ರಿ ದಾಳಿ ನಡೆಸಿ ಜಹಾಂಗಿರ್ ಅಲಮ್ ಎಂಬಾತನನ್ನು ಬಂಧಿಸಿವೆ ಎಂದು ಪೊಲೀಸ್ ವಕ್ತಾರರೊಬ್ಬರು ತಿಳಿಸಿದರು.

‘‘ಹೋಲಿ ಆರ್ಟಿಸನ್ ಬೇಕರಿ ದಾಳಿಯ ಪ್ರಮುಖ ಸೂತ್ರಧಾರರ ಪೈಕಿ ಆತ ಒಬ್ಬನಾಗಿದ್ದಾನೆ’’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ದಾಳಿಯ ಪ್ರಮುಖ ಸೂತ್ರಧಾರ ಬಾಂಗ್ಲಾದೇಶಿ ಕೆನಡಿಯನ್ ತಮೀಮ್ ಚೌಧರಿ ಈಗಾಗಲೇ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News