ಶ್ರೀಲಂಕಾ ವಿರುದ್ದ ದಕ್ಷಿಣ ಆಫ್ರಿಕ ಕ್ಲೀನ್‌ಸ್ವೀಪ್
Update: 2017-01-14 22:54 IST
ಜೋಹಾನ್ಸ್‌ಬರ್ಗ್, ಜ.14: ದಕ್ಷಿಣ ಆಫ್ರಿಕ ತಂಡ ಶ್ರೀಲಂಕಾ ವಿರುದ್ಧದ 3ನೆ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಹಾಗೂ 118 ರನ್‌ಗಳ ಅಂತರದಿಂದ ಜಯಿಸಿದೆ. ಈ ಮೂಲಕ 3 ಪಂದ್ಯಗಳ ಟೆಸ್ಟ್ ಸರಣಿಯನ್ನು 3-0 ಅಂತರದಿಂದ ಕ್ಲೀನ್‌ಸ್ವೀಪ್ ಮಾಡಿದೆ.
ಆಫ್ರಿಕದ ಮೊದಲ ಇನಿಂಗ್ಸ್‌ಗೆ 426 ರನ್‌ನಿಂದ ಉತ್ತರವಾಗಿ 4 ವಿಕೆಟ್‌ಗೆ 80 ರನ್‌ನಿಂದ ಮೊದಲ ಇನಿಂಗ್ಸ್ ಆರಂಭಿಸಿದ ಲಂಕಾ 131 ರನ್‌ಗೆ ಆಲೌಟಾಯಿತು.
ಫಾಲೋ-ಆನ್‌ಗೆ ಸಿಲುಕಿದ ಲಂಕಾ 2ನೆ ಇನಿಂಗ್ಸ್‌ನಲ್ಲಿ ಮತ್ತೊಮ್ಮೆ 177 ರನ್‌ಗೆ ಆಲೌಟಾಯಿತು. 3ನೆ ದಿನದಾಟವಾದ ಶನಿವಾರ ಲಂಕಾದ 16 ವಿಕೆಟ್‌ಗಳು ಪತನಗೊಂಡವು. ಮೊದಲ ಇನಿಂಗ್ಸ್‌ನಲ್ಲಿ ಫಿಲ್ಯಾಂಡರ್ ಹಾಗೂ ರಬಾಡ ತಲಾ 3 ವಿಕೆಟ್ ಪಡೆದರೆ, 2ನೆ ಇನಿಂಗ್ಸ್‌ನಲ್ಲಿ ಪಾರ್ನೆಲ್ ಹಾಗೂ ಡುಯಾನ್ ಒಲಿವೆರ್ 7 ವಿಕೆಟ್‌ಗಳನ್ನು ಹಂಚಿಕೊಂಡರು. 2ನೆ ಇನಿಂಗ್ಸ್‌ನಲ್ಲಿ ಕರುಣರತ್ನೆ(50) ಸರ್ವಾಧಿಕ ರನ್ ಗಳಿಸಿದರು.