×
Ad

ಮುಲ್ಲರ್‌ಗೆ ಸಿಡ್ನಿ ಸಿಂಗಲ್ಸ್ ಪ್ರಶಸ್ತಿ

Update: 2017-01-14 22:57 IST

ಸಿಡ್ನಿ, ಜ.14: ಬ್ರಿಟನ್‌ನ ಡ್ಯಾನ್ ಎವನ್ಸ್‌ರನ್ನು ಮಣಿಸಿದ ಗಿಲ್ಲೆಸ್ ಮುಲ್ಲರ್ ಚೊಚ್ಚಲ ಎಟಿಪಿ ಟೂರ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

  ಶನಿವಾರ ಇಲ್ಲಿ ನಡೆದ ಸಿಡ್ನಿ ಇಂಟರ್‌ನ್ಯಾಶನಲ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಲಕ್ಸಂಬರ್ಗ್‌ನ ಮುಲ್ಲರ್ ಅವರು ಇವಾನ್ಸ್‌ರನ್ನು 7-6(5), 6-2 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ. ಈ ಮೂಲಕ 17 ವರ್ಷಗಳ ವೃತ್ತಿಪರ ಟೆನಿಸ್ ಬದುಕಿನಲ್ಲಿ ಚೊಚ್ಚಲ ಪ್ರಶಸ್ತಿಯನ್ನು ಜಯಿಸಿದ್ದಾರೆ.

33ರ ಪ್ರಾಯದ ಮುಲ್ಲರ್ ಈ ಹಿಂದೆ ಐದು ಬಾರಿ ಎಟಿಪಿ ಟೂರ್ ಫೈನಲ್ಸ್‌ಗೆ ತಲುಪಿದ್ದರೂ ಪ್ರಶಸ್ತಿ ಗೆಲ್ಲಲು ವಿಫಲರಾಗಿದ್ದರು.

ಆಸ್ಟ್ರೇಲಿಯನ್ ಓಪನ್‌ನ ತಾಲೀಮು ಪಂದ್ಯವೆಂದೇ ಪರಿಗಣಿಸಲ್ಪಟ್ಟಿರುವ ಸಿಡ್ನಿ ಟೆನಿಸ್ ಟೂರ್ನಿಯಲ್ಲಿ ಆರನೆ ಪ್ರಯತ್ನದಲ್ಲಿ ಪ್ರಶಸ್ತಿ ಎತ್ತಿ ಹಿಡಿದಿರುವ ಮುಲ್ಲರ್ ದೀರ್ಘಕಾಲದ ಕನಸನ್ನು ಈಡೇರಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News