52.5 ಲ.ರೂ.ಗಳ ಹೊಸನೋಟು ವಶ
Update: 2017-01-15 20:10 IST
ಮಲಪ್ಪುರಂ(ಕೇರಳ),ಜ.15: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಲೆಕ್ಕವಿಲ್ಲದ 52.5 ಲ.ರೂ.ಗಳ 2,000 ರೂ.ಹೊಸನೋಟುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಕಳೆದ ರಾತ್ರಿ ಕೊಝಿಕೋಡ್ ಜಿಲ್ಲೆಯ ನಿವಾಸಿಗಳಾದ ಫಝ್ಲುರ್ ರಹಮಾನ್ ಮತ್ತು ಉಣ್ಣಿಮೋಯಿ ಎನ್ನುವವರು ಕೊಝಿಕೋಡ್‌ನಿಂದ ಮಂಜೇರಿಗೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ಸನ್ನು ವಲ್ಲುವಂಪುರಂ ಬಳಿ ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಅವರ ಬ್ಯಾಗುಗಳಲ್ಲಿ 50 ಲ.ರೂ.ಗಳು ಪತ್ತೆಯಾಗಿವೆ.
ಕಳೆದ ರಾತ್ರಿ ಮಂಜೇರಿ ಪೊಲೀಸ್ ಠಾಣೆಯ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಪೊಲೀಸರು ಬೈಕ್ ಸವಾರ ಜಮ್ಶೀರ್ ಎಂಬಾತ ಸಾಗಿಸುತ್ತಿದ್ದ 2.5 ಲ.ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.