×
Ad

ಸರಕಾರಿ ನೌಕರರು ಸದ್ಯಕ್ಕೆ ಲೋಕಪಾಲ ಕಾಯ್ದೆಯಡಿ ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಬೇಕಾಗಿಲ್ಲ

Update: 2017-01-15 20:18 IST

ಹೊಸದಿಲ್ಲಿ,ಜ.15: ಕೇಂದ್ರ ಸರಕಾರಿ ನೌಕರರು ಲೋಕಪಾಲ ಕಾಯ್ದೆಯಡಿ ಕಡ್ಡಾಯವಾಗಿ ತಮ್ಮ ಆಸ್ತಿ ವಿವರಗಳನ್ನು ಸಲ್ಲಿಸಲು ವಿಧಿಸಲಾಗಿದ್ದ ಗಡುವನ್ನು ಸರಕಾರವು ಅನಿರ್ದಿಷ್ಟಾವಧಿಗೆ ವಿಸ್ತರಿಸಿದೆ.

ಸರಕಾರವು ಈ ಸಂಬಂಧ ಹೊಸ ನಮೂನೆ ಮತ್ತು ನಿಯಮಗಳನ್ನು ಅಂತಿಮಗೊಳಿಸುತ್ತಿದೆ. ಈ ವಿವರಗಳನ್ನು ಸಲ್ಲಿಸಲು 2016,ಡಿ.31 ಕೊನೆಯ ದಿನಾಂಕ ವಾಗಿತ್ತು. ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಈ ಸಂಬಂಧ ಆದೇಶವನ್ನು ಹೊರಡಿಸಿದೆ. ಸುಮಾರು 50.68 ಲಕ್ಷ ಕೇಂದ್ರ ಸರಕಾರಿ ನೌಕರರಿದ್ದಾರೆ.

ಲೋಕಪಾಲ ಕಾಯ್ದೆಯ ನಿಯಮಗಳಡಿ ಪ್ರತಿಯೋರ್ವ ಸರಕಾರಿ ನೌಕರ ಪ್ರತಿ ವರ್ಷ ಮಾ.31ಕ್ಕೆ ಇದ್ದಂತೆ ತನ್ನ ಆಸ್ತಿಗಳು ಮತ್ತು ಹೊಣೆಗಾರಿಕೆಗಳ ವಿವರಗಳನ್ನು ಆ ವರ್ಷದ ಜು.31ರಂದು ಅಥವಾ ಅದಕ್ಕೆ ಮೊದಲು ಸಲ್ಲಿಸಬೇಕು.

2014ನೇ ಸಾಲಿಗೆ ಈ ವಿವರಗಳನ್ನು ಘೋಷಿಸಲು ಸೆ.15 ಕೊನೆಯ ದಿನಾಂಕವಾಗಿತ್ತು. ಬಳಿಕ ಅದನ್ನು 2015 ಎ.30 ಮತ್ತು ನಂತರ ಅ.15ಕ್ಕೆ ವಿಸ್ತರಿಸಲಾಗಿತ್ತು. ಮತ್ತೆ ಈ ದಿನಾಂಕವನ್ನು 2016,ಎ.15ಕ್ಕೆ,ಬಳಿಕ ಜು.31ಕ್ಕೆ ವಿಸ್ತರಿಸಲಾಗಿತ್ತು. ಲೋಕಪಾಲರು ಮತ್ತು ಲೋಕಾಯುಕ್ತರ ಕಾಯ್ದೆಗೆ ತಿದ್ದುಪಡಿ ತರಲು ಮಸೂದೆಯೊಂದನ್ನು ಸಂಸತ್ತು ಅಂಗೀಕರಿಸಿದ ಬಳಿಕ ಅಂತಿಮ ಗಡುವನ್ನು ಡಿ.31ಕ್ಕೆ ವಿಸ್ತರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News