×
Ad

ಮೇಲ್ಜಾತಿಯ ವ್ಯಕ್ತಿಗೆ ‘ರಾಮ್ ರಾಮ್ ’ ಹೇಳದ ದಲಿತನ ಮನೆಯನ್ನು ಸುಟ್ಟರು !

Update: 2017-01-15 23:38 IST

ಆಗ್ರಾ,ಜ.15: ಇಲ್ಲಿಯ ದೌಲತ್‌ಪುರ ಗ್ರಾಮದಲ್ಲಿ ಮೇಲ್ಜಾತಿಯ ವ್ಯಕ್ತಿಗೆ ‘ರಾಮ್ ರಾಮ್’ ಹೇಳದ ‘ತಪ್ಪಿಗಾಗಿ’ ದಲಿತನೋರ್ವನ ಮನೆಗೆ ಬೆಂಕಿ ಹಚ್ಚಲಾಗಿದೆ.
ದಲಿತ ಹರಿ ಓಂ ಕಥರಿಯಾ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಗ್ರಾಮದ ಮೇಲ್ಜಾತಿಯ ವ್ಯಕ್ತಿ ಠಾಕುರ್ ಛೋಟೆಲಾಲ್ ಸಮೀಪದಿಂದ ಹಾದು ಹೋಗುತ್ತಿದ್ದ. ಹರಿ ತನಗೆ ‘ರಾಮ್ ರಾಮ್’ ಹೇಳದಿದ್ದಾಗ ಸಿಟ್ಟಾದ ಲಾಲ್ ಆತನನ್ನು ಥಳಿಸಿದ್ದಾನೆ. ಬಿಡಿಸಲು ಬಂದ ಆತನ ಪತ್ನಿ ಮೀರಾ ಮತ್ತು ಸೋದರ ಶ್ಯಾಮಸುಂದರ್ ಅವರಿಗೂ ಬಡಿದಿದ್ದಾನೆ. ರಾತ್ರಿ ಹರಿಯ ಮನೆಯ ಬಳಿಗೆ ಬಂದ ಲಾಲ್ ಮತ್ತು ಸಹಚರರು ಮತ್ತೆ ಅವರನ್ನೆಲ್ಲ ಥಳಿಸಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸಿ ಬಳಿಕ ಮನೆಗೆ ಬೆಂಕಿ ಹಚ್ಚಿದ್ದಾರೆ.

ಹರಿಯ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡ ಬೇವಾರ್ ಠಾಣಾ ಪೊಲೀಸರು ಛೋಟೆಲಾಲ್‌ನ ತಂದೆ ಬಲರಾಮ ಸಿಂಗ್‌ನನ್ನು ರವಿವಾರ ಬಂಧಿಸಿದ್ದಾರೆ. ಇತರರಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಗ್ರಾಮದಲ್ಲಿ ಶಾಂತಿಯನ್ನು ಕಾಯ್ದುಕೊಳ್ಳಲು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News