ಪಾಟ್ನಾ ದುರಂತ: 20ಶವಗಳನ್ನು ಮೇಲೆತ್ತಿದ ರಾಜೇಂದ್ರ ಸಹಾನಿ
ಪಾಟ್ನಾ,ಜ.16: ಸಮಾರು 50ವರ್ಷದ ರಾಜೇಂದ್ರ ಸಹಾನಿಹೀರೊ ಆಗಿದ್ದಾರೆ. ಅವರು ಜ.14 ಶನಿವಾರದಿಂದ ರವಿವಾರ ಮಧ್ಯಾಹ್ನದವರೆಗೆ ಅವರ ಫೋನ್ ಪ್ರತಿಕ್ಷಣವೂ ರಿಂಗುಣಿಸುತ್ತಿತ್ತು.
ರಾಜೇಂದ್ರ ಸಹಾನಿ ಗೋತ್‌ಖೋರ್ ಜನವರಿ 14ರಂದು ಸಬಲಪುರ್‌ನಲ್ಲಿ ದೋಣಿ ದುರಂತದಲ್ಲಿ ಮೃತಪಟ್ಟ ಸುಮಾರು 20 ಮಂದಿಯ ಶವವನ್ನು ಮೇಲೆತ್ತಿದ್ದಾರೆ.
"ನಾವು ಮನೆಯಲ್ಲಿದ್ದೆವು. ಆಗ ಜಿಲ್ಲಾಡಳಿತದಿಂದ ಫೋನ್ ಬಂತು ಕೂಡಲೇ ಹೊರಟು ಬರಬೇಕೆಂದು ಅತ್ತಲಿನವರು ಹೇಳಿದ್ದರು. ನಮ್ಮ ತಂಡದ ಜೊತೆಗೆ ಅಲ್ಲಿಗೆ ಹೋದೆವು. ನಂತರ ಶನಿವಾರ ರಾತ್ರಿ ಇಪ್ಪತ್ತು ಶವಗಳನ್ನು ಮೇಲೆತ್ತಿದ್ದೇವೆ. ರವಿವಾರ ಬೆಳಗ್ಗೆ ನಾಲ್ಕು ಶವಗಳನ್ನು ಮೇಲೆತ್ತಿದೆವು. ಇದಲ್ಲದೆ ಎಷ್ಟು ಬಟ್ಟೆ, ಚಪ್ಪಲಿ,ಸ್ವೆಟರ್ ನದಿಯಿಂದ ಮೇಲೆ ತಂದಿದ್ದೇವೆ ಅದಕ್ಕೆ ಲೆಕ್ಕವಿಲ್ಲ"
ರಾಜೇಂದ್ರ ಸಹಾನಿಮೂವತ್ತೈದು ವರ್ಷಗಳಿಂದ ಮುಳುಗುಗಾರರಾಗಿ ಸೇವೆ ಸಲ್ಲಿಸುತ್ತ ಬಂದಿದ್ದಾರೆ. ಅವರ ತಂಡದಲ್ಲಿ 25 ಮಂದಿ ಇದ್ದಾರೆ. ಇಷ್ಟರವರೆಗೆ ಅವರು 6,000 ಮಂದಿಯನ್ನು ಜೀವಂತ ಅಥವಾ ಶವವಾಗಿ ಮೇಲೆತ್ತಿದ್ದಾರೆ. ಸಬಲಪುರ ದೋಣಿ ದುರಂತದಲ್ಲಿ ಅವರು ದೇಸಿ ತಂತ್ರಜ್ಞಾನ ಬಳಸಿ ಶವಗಳನ್ನು ಮೇಲೆತ್ತಿದ್ದಾರೆ. ಪಾಟ್ನಾದ ದೋಣಿದುರಂತದಲ್ಲಿ 24 ಶವಗಳನ್ನು ಮೇಲೆತ್ತಲಾಗಿದೆ. ಇದೇ ವೇಳೆ ರವಿವಾರ ಮೇಲೆತ್ತಲಾದ ಶವಗಳನ್ನು ಎನ್‌ಡಿಆರ್‌ಎಫ್‌ನ ಡೀಪ್ ಡೈವರ್ಸ್ ಮೇಲೆ ತಂದಿದ್ದಾರೆ ಎಂದು ಅದು ಹೇಳುತ್ತಿದೆ ಎಂದು ಬಿಬಿಸಿ ವರದಿ ಮಾಡಿದೆ.