ಸಹೋದರಿಯನ್ನು ದುಷ್ಕರ್ಮಿಗಳಿಂದ ಕಾಪಾಡಲು ಜೀವತೆತ್ತ ಯುವಕ
ಹೊಸದಿಲ್ಲ,ಜ.16: ಪಶ್ಚಿಮಬಂಗಾಳದಲ್ಲಿ ಸಹೋದರನೊಬ್ಬ ಸಹೋದರಿಯನ್ನು ದುಷ್ಕರ್ಮಿಗಳ ಕೀಟಲೆಯಿಂದ ಪಾರುಮಾಡಲು ಕೊನೆಉಸಿರಿನವರೆಗೆ ಯತ್ನಿಸಿದ ಯುವಕನೊಬ್ಬ ಸ್ಕೂಟರ್ ಅಪಘಾತದಲ್ಲಿ ಪ್ರಾಣತೆತ್ತ ಘಟನೆ ವರದಿಯಾಗಿದೆ. ಕಳೆದಶುಕ್ರವಾರ ಮೂವತ್ತಾರು ವರ್ಷದ ಗುಲಾಮ್ ಮುರ್ತಝಾ ಅಹ್ಮದ್ ತನ್ನ ಇಬ್ಬರು ಸಹೋದರಿಯರನ್ನು ಸ್ಕೂಟರ್‌ನಲ್ಲಿ ಕರೆದು ಶೇವರತಾಲಾ ಗ್ರಾಮಕ್ಕೆ ಮರಳುತ್ತಿದ್ದರು. ರಾತ್ರಿಯ ಹತ್ತುಗಂಟೆಗೆ ಐವರು ದುರುಳರು ಅವರನ್ನು ಹಿಂಬಾಲಿಸತೊಡಗಿದರು.
ರಾತ್ರಿಯ ಕತ್ತಲಿನ ಲಾಭ ಪಡೆದ ದುರುಳರು ಅಹ್ಮದ್‌ರ ತಂಗಿಯ ಮೇಲೆ ಅವಾಚ್ಯ ಪದಗಳನ್ನು ಬಳಸತೊಡಗಿದರು. ಅಹ್ಮದ್‌ರ ಇಬ್ಬರು ತಂಗಿಯರ ಮೇಲೆದುಷ್ಕರ್ಮಿಗಳ ಕಣ್ಣಿತ್ತು. ಅವರ ಕೆಟ್ಟ ವರ್ತನೆಗೆ ಹೆದರಿ ಸಹೋದರಿಯರನ್ನು ಪಾರು ಮಾಡುವ ಪ್ರಯತ್ನದಲ್ಲಿ ಅಹ್ಮದ್‌ರು ಸ್ಕೂಟರ್ ಸ್ಕಿಡ್ ಆಗಿತ್ತು. ಅಹ್ಮದ್ ಮತ್ತು ಸಹೋದರಿಯರು ಗಂಭೀರ ಗಾಯಗೊಂಡರು. ಅಪಘಾತ ತಿಳಿದು ಅಲ್ಲಿ ಸೇರಿದ ಜನರು ಕೂಡಲೇ ಆಸ್ಪತ್ರೆಗೆ ಕರೆತಂದರೂ ಅಹ್ಮದ್ ಅಲ್ಲಿ ಅಸುನನೀಗಿದ್ದಾರೆ.
ಸಹೋದರಿಯರ ಆರೋಗ್ಯಸ್ಥಿತಿ ಈಗಲೂ ಗಂಭೀರವಾಗಿದೆ. ಅಹ್ಮದ್ ಮತ್ತು ಸಹೋದರಿಯರನ್ನು ಹಿಂಬಾಲಿಸಿ ಬಂದಿದ್ದ ದುರುಳರು ಅಹ್ಮದ್‌ರ ಸ್ಕೂಟರ್ ಉರುಳಿಬಿದ್ದ ಕೂಡಲೇ ಸ್ಥಳದಿಂದ ತಪ್ಪಿಸಿಕೊಂಡಿದ್ದಾರೆ. ಅಹ್ಮದ್‌ರ ತಂದೆ ನಸೀಮುದ್ದೀನ್ ಶೇಕ್ ದೂರು ನೀಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ವರದಿ ತಿಳಿಸಿದೆ.