×
Ad

ಸರಕಾರಿ ವಾಹನಗಳಲ್ಲಿ ಸ್ಪೀಡ್ ಗವರ್ನರ್:ರಾಜ್ಯಗಳಿಂದ ಉತ್ತರ ಕೇಳಿದ ಸುಪ್ರೀಂ

Update: 2017-01-16 17:54 IST

ಹೊಸದಿಲ್ಲಿ,ಜ.16: ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಸ್ಪೀಡ್ ಗವರ್ನರ್ ಅಳವಡಿಕೆಯನ್ನು ಕೋರಿ ಎನ್‌ಜಿಒ ಸುರಕ್ಷಾ ಫೌಂಡೇಷನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯ ಕುರಿತು ಉತ್ತರಗಳನ್ನು ಸಲ್ಲಿಸದ್ದಕ್ಕಾಗಿ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಹಲವಾರು ರಾಜ್ಯಗಳನ್ನು ತೀವ್ರ ತರಾಟೆಗೆತ್ತಿಕೊಂಡಿತು.

ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಮತ್ತು ನ್ಯಾ.ಡಿ.ವೈ.ಚಂದ್ರಚೂಡ ಅವರನ್ನೊಳಗೊಂಡ ಪೀಠವು ಪಿಐಎಲ್‌ನ ಮುಂದಿನ ವಿಚಾರಣಾ ದಿನಾಂಕದಂದು ಸಂಬಂಧಿತ ದಾಖಲೆಗಳೊಂದಿಗೆ ತನ್ನೆದುರು ಖುದ್ದಾಗಿ ಹಾಜರಾಗುವಂತೆ ದಿಲ್ಲಿ ಮತ್ತು ಬಿಹಾರಗಳಂತಹ ರಾಜ್ಯಗಳ ಸಾರಿಗೆ ಕಾರ್ಯದರ್ಶಿಗಳಿಗೆ ನಿರ್ದೇಶವನ್ನೂ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News