ಗಗನಯಾತ್ರಿ ಜೀನ್ ಸೆರ್ನನ್ ವಿಧಿವಶ
Update: 2017-01-17 11:08 IST
ನ್ಯೂಯಾರ್ಕ್, ಜ.17:ಚಂದ್ರನ ಮೇಲೆ ನಡೆದಾಡಿದ ಅಮೆರಿಕಾದ ಮಾಜಿ ಗಗನಯಾತ್ರಿ ಜೀನ್ ಸೆರ್ನನ್ ಸೋಮವಾರ ನಿಧನರಾದರು.
ಅವರಿಗೆ 82 ವರ್ಷ ವಯಸ್ಸಾಗಿತ್ತು. ನಾಸಾದ ಅಪೊಲೊ 17 ಮಿಷನ್ ನ ಕಮಾಂಡರ್ ಆಗಿದ್ದ ಸೆರ್ನಾನ್ ಅವರು ಚಂದ್ರನ ಮೇಲ್ಮೈ ಮೇಲೆ ಡಿಸೆಂಬರ್ 1972ರಲ್ಲಿ ಮೂರನೇ ಬಾರಿ ಹೋಗಿ ಬಂದಿದ್ದರು. ಇದು ಅವರ ಕೊನೆಯ ಅಂತರಿಕ್ಷ ಯಾತ್ರೆಯಾಗಿತ್ತು
ಅವರು 1966ರಲ್ಲಿ ಮೊದಲ ಬಾರಿ ಚಂದ್ರನ ಮೇಲೆ ನಡೆದಾಡಿದ್ದರು. 1969ರಲ್ಲಿ ಎರಡನೆ ಬಾರಿ ಸೆರ್ನಾನ್ ಗಗನಯಾತ್ರೆ ಕೈಗೊಂಡು ವಾಪಸಾಗಿದ್ದರು.
ಜೀನ್ ಸೆರ್ನನ್ ಬಗ್ಗೆ ಬರೆದ 'ದ ಲಾಸ್ಟ್ ಮ್ಯಾನ್ ಆನ್ ದ ಮೂನ್' ಪುಸ್ತಕ ಕಳೆದ ವರ್ಷ ಬಿಡುಗಡೆಯಾಗಿತ್ತು. ಸೆರ್ನನ್ ಅವರು ಪತ್ನಿ ಜನ್ ನನ್ನಾ ಸೆರ್ನನ್, ಪುತ್ರಿ ತೆರೆಸಾ, ಬಂಧು ಬಳಗವನ್ನು ಅಗಲಿದ್ದಾರೆ