×
Ad

ವೇಮುಲಾ ನಿಧನದ ಪ್ರಥಮ ವರ್ಷಾಚರಣೆ : ಪ್ರತಿಭಟನಾಕಾರರ ಬಂಧನ

Update: 2017-01-17 22:15 IST

ಹೈದರಾಬಾದ್, ಜ.17: ರೋಹಿತ್ ವೇಮುಲಾ ನಿಧನದ ಪ್ರಥಮ ವರ್ಷಾಚರಣೆ ಸಂದರ್ಭ ಹೈದರಾಬಾದ್ ವಿಶ್ವವಿದ್ಯಾನಿಲಯದ ಗೇಟನ್ನು ಮುರಿದು ಒಳನುಗ್ಗಲು ಯತ್ನಿಸಿದ ಪ್ರತಿಭಟನಾಕಾರರ ತಂಡವನ್ನು ಪೊಲೀಸರು ಚದುರಿಸಿದರು.

ವಿವಿಧ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ವಿಶ್ವವಿದ್ಯಾನಿಲಯದ ಗೇಟು ಎದುರು ಜಮಾಯಿಸಿದ ಪ್ರತಿಭಟನಾಕಾರರು, ಉಪಕುಲಪತಿಯ ವಿರುದ್ಧ ಘೋಷಣೆ ಕೂಗಿದರಲ್ಲದೆ ಅವರನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದರು. ಈ ವೇಳೆ ಪ್ರಧಾನ ಪ್ರವೇಶ ದ್ವಾರದ ಎದುರು ಪೊಲೀಸರು ರಚಿಸಿದ್ದ ತಡೆಬೇಲಿಯನ್ನು ಮುರಿದು ಒಳನುಗ್ಗಲು ಯತ್ನಿಸಿದಾಗ ಪೊಲೀಸರು ತಡೆದು, ಅವರನ್ನು ಪೊಲೀಸ್ ವಾಹನವೊಂದರಲ್ಲಿ ಕರೆದೊಯ್ದರು.

  ವಿಶ್ವವಿದ್ಯಾಲಯದಲ್ಲಿರುವ ಜಾತೀಯತೆೆಯ ಬೇಧಭಾವದ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದು ಸಾಮಾಜಿಕ ನ್ಯಾಯಕ್ಕಾಗಿನ ಜಂಟಿ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಈ ಸಂದರ್ಭ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News