ಸುಳ್ಯ ಕ್ಯಾಂಪ್ಕೊ ಕಚೇರಿ ಎದುರು ಕಾಂಗ್ರೆಸ್: ಉಪವಾಸ ಸತ್ಯಾಗ್ರಹ

Update: 2017-01-17 18:51 GMT

ಸುಳ್ಯ, ಜ.17: ಪ್ರಧಾನಿ ನರೇಂದ್ರ ಮೋದಿ ನೋಟ್ ಬ್ಯಾನ್ ಮಾಡಿದ್ದರಿಂದ ದೇಶದ ಜನರಿಗೆ ಆಗಿರುವ ತೊಂದರೆಯನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು, ಬೆಂಬಲ ಬೆಲೆಯಲ್ಲಿ ಅಡಿಕೆ ಖರೀದಿ ಮಾಡಬೇಕು ಎಂದು ಆಗ್ರಹಿಸಿ ಸುಳ್ಯ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಮಂಗಳವಾರ ಸುಳ್ಯ ಕ್ಯಾಂಪ್ಕೊ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಯಿತು. 

ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಉಮಾನಾಥ ಶೆಟ್ಟಿ ಮಾತನಾಡಿ, ನೋಟು ರದ್ದತಿ ಮೂಲಕ ಮೋದಿ ಸರಕಾರ ರೈತನ ಬಾಳಿನಲ್ಲಿ ಚೆಲ್ಲಾಟ ಆಡುತ್ತಿದೆ. ನೋಟು ರದ್ಧತಿಯಿಂದ ಪ್ರಧಾನಿಯವರ ಅವನತಿ ಆರಂಭಗೊಂಡಿದೆ. ಈ ಉಪವಾಸ ನೋಟು ನಿಷೇಧದಿಂದ ಸತ್ತವರಿಗೆ ಸದ್ಗತಿ ಕರುಣಿಸುತ್ತದೆ ಎಂದರು.

   ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ವೆಂಕಪ್ಪಗೌಡ, ಹಿರಿಯ ನ್ಯಾಯವಾದಿ , ಮಾಜಿ ಸಿಪಿಎಂ ನಾಯಕ ಸೂರ್ಯನಾರಾಯಣ ಭಟ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಜಾಕೆ ಮಾಧವ ಗೌಡ, ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ್, ಕೆಪಿಸಿಸಿ ಸದಸ್ಯ ಡಾ.ರಘು, ಕೃಷ್ಣಪ್ಪ, ಧನಂಜಯ ಅಡ್ಪಂಗಾಯ, ಕೆ.ಎಂ. ಮುಸ್ತಫಾ, ಅಶೋಕ್ ಚೂಂತಾರು ಮತ್ತಿತರರು ಮಾತನಾಡಿದರು.

ಎಸ್.ಶಂಸುದ್ದೀನ್, ಟಿ.ಎಂ.ಶಹೀದ್, ಸುಧೀರ್ ರೈ ಮೇನಾಲ, ಕೆ. ಗೋಕುಲ್ ದಾಸ್, ಪಿ.ಎ.ಮುಹಮ್ಮದ್, ಅಬ್ದುಲ್ ಗಫೂರ್ ಕಲ್ಮಡ್ಕ, ಅಬ್ದುಲ್ ಮಜೀದ್, ಮುಹಮ್ಮದ್ ಪವಾಝ್, ಅನಿಲ್ ರೈ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News