ಸಲ್ಮಾನ್ ಖಾನ್ ವಿರುದ್ಧ ಕೃಷ್ಣ ಮೃಗ ಬೇಟೆಯಾಡಲು ಅಕ್ರಮ ಶಸ್ತ್ರಾಸ್ತ್ರ ಬಳಕೆ ಆರೋಪ; ಶೀಘ್ರ ತೀರ್ಪು ಪ್ರಕಟ
Update: 2017-01-18 10:57 IST
ಹೊಸದಿಲ್ಲಿ, ಜ.18: ಹದಿನೆಂಟು ವರ್ಷಗಳ ಹಿಂದೆ ರಾಜಸ್ಥಾನದ ಜೋಧ್ ಪುರದ ಕಂಕಣಿ ಗ್ರಾಮದಲ್ಲಿ ಕೃಷ್ಣ ಮೃಗ ಬೇಟೆಯಾಡಲು ಅಕ್ರಮ ಶಸ್ತ್ರಾಸ್ತ್ರ ಬಳಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಜೋಧ್ ಪುರದ ಸೆಷನ್ ನ್ಯಾಯಾಲಯವು ಇಂದು ತೀರ್ಪು ನೀಡಲಿದೆ.
1998ರ ಅ.1 ಮತ್ತು 2ರಂದು ಕೃಷ್ಣ ಮೃಗ ಬೇಟಿಯಾಡಲು ಸಲ್ಮಾನ್ ಖಾನ್ ಲೈಸೆನ್ಸ್ ಅವಧಿ ಮುಗಿದ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡಿದ್ದರು ಎಂದು ಆರೋಪಿಸಲಾಗಿದೆ.
ಈ ಸಂಬಂಧ ಜನವರಿ 9 ರಂದು ವಿಚಾರಣೆ ನಡೆಸಿರುವ ಸೆಷನ್ ನ್ಯಾಯಾಲಯದ ನ್ಯಾಯಾಧೀಶರಾದ ದಲ್ಪತ್ ಸಿಂಗ್ ರಾಜಪುರೋಹಿತ್ ತೀರ್ಪನ್ನು ಬುಧವಾರಕ್ಕೆ ಕಾಯ್ದಿರಿಸಿದ್ದಾರೆ.
ತೀರ್ಪು ಪ್ರಕಟಣೆಯ ವೇಳೆ ಹಾಜರಿರುವಂತೆ ಸಲ್ಮಾನ್ ಖಾನ್ ಗೆ ಜೋಧ್ ಪುರ ನ್ಯಾಯಾಲಯವು ಆದೇಶಿಸಿದ್ದು, ಅದರಂತೆ ಸಲ್ಮಾನ್ ಖಾನ್ ಇದೀಗ ಜೋಧ್ ಪುರ ನ್ಯಾಯಾಲಯಕ್ಕೆ ಆಗಮಿಸುತ್ತಿದ್ದಾರೆ. ನ್ಯಾಯಾಯದ ಆವರಣದಲ್ಲಿ ಜಮಾಯಿಸಿದ್ದ ಪರ್ತಕರ್ತರನ್ನು ಹೊರದಬ್ಬಲಾಗಿದೆ.