×
Ad

ಬಿಜೆಪಿಯ ಸಂಗೀತ್ ಸೋಮ್ ರಿಂದ ಮುಝಫ್ಫರ್ ನಗರ ಗಲಭೆ ಸೀಡಿ ತೋರಿಸಿ ಚುನಾವಣಾ ಪ್ರಚಾರ

Update: 2017-01-18 19:10 IST

ಲಕ್ನೋ,ಜ.18: ವಿವಾದಾತ್ಮಕ ಬಿಜೆಪಿ ಶಾಸಕ ಸಂಗೀತ್ ಸೋಮ್ ವಿರುದ್ಧ ತನ್ನ ವಿಧಾನಸಭಾ ಕ್ಷೇತ್ರ ಸರ್ಧಾನಾದಲ್ಲಿ ಕೋಮು ಪ್ರಚೋದನೆಗೆ ಇಂಬು ನೀಡಿದ ಆರೋಪದಲ್ಲಿ ಇಂದು ಪ್ರಕರಣ ದಾಖಲಾಗಿದೆ.

ಮಂಗಳವಾರ ರಾತ್ರಿ ಆಲಂಗೀರ್ ಫರೀದಾಪುರ ಗ್ರಾಮದಲ್ಲಿ ಸೋಮ್ ಅವರ ಬೆಂಬಲಿಗ ಶೇಖರ್ ಮತ್ತು ಚಾಲಕನಿಂದ ಪೆನ್ ಡ್ರೈವ್ ಮತ್ತು ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಅವರಿಬ್ಬರೂ ಸೋಮ್ ಅವರನ್ನು ಹಿಂದುಗಳ ರಕ್ಷಕನೆಂದು ವೈಭವೀಕರಿಸುವ ಮತ್ತು ಮತದಾರರನ್ನು ಧ್ರುವೀಕರಿಸುವ ಸಾಕ್ಷಚಿತ್ರವನ್ನು ಚುನಾವಣಾ ಆಯೋಗದ ಪೂರ್ವಾನುಮತಿ ಪಡೆದುಕೊಳ್ಳದೆ ಪ್ರದರ್ಶಿಸಿದ್ದರು ಎಂದು ಆರೋಪಿಸಲಾಗಿದೆ.

ಅವರಿಬ್ಬರ ವಿರುದ್ಧ ಐಪಿಸಿಕಲಂ 188ರಡಿ ಆರೋಪ ಹೊರಿಸಿರುವ ಪೊಲೀಸರು ಸೋಮ್ ವಿರುದ್ಧ ಜನ ಪ್ರಾತಿನಿಧ್ಯ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News