×
Ad

ಕೇರಳದಲ್ಲಿ ಸೋಮವಾರ ಪೆಟ್ರೋಲ್ ಬಂಕ್ ಮುಷ್ಕರ!

Update: 2017-01-19 13:14 IST

ಕೊಚ್ಚಿ,ಜ.19: ರಾಜ್ಯದಲ್ಲಿ ಸೋಮವಾರ ಪೆಟ್ರೋಲ್ ವ್ಯಾಪಾರಸ್ಥರಿಂದ ಬಂಕ್ ಮುಷ್ಕರ ನಡೆಯಲಿದೆ.ಹೊಸ ಬಂಕ್‌ಗಳ ಎನ್‌ಒಸಿ ಕೊಡಲು ಸ್ಪಷ್ಟವಾದ ಮಾನದಂಡಗಳನ್ನು ಸೇರಿಸಿ, ಏಕಕಿಂಡಿ ವ್ಯವಸ್ಥೆ ಕೂಡಲೇ ತರಬೇಕು. 28.10.2014ರ ಏಕಕಿಂಡಿ ವ್ಯವಸ್ಥೆಗೆ ಕೇಂದ್ರಸರಕಾರದ ಆದೇಶ ಹೊರಡಿಸಿದ ಬಳಿಕ ಕೇರಳದಲ್ಲಿ ನೀಡಲಾದ ಎನ್‌ಒಸಿ ರದ್ದುಪಡಿಸಬೇಕು. ಎನ್‌ಒಸಿಯ ತಪ್ಪುಗಳನ್ನು ತನಿಖಿಸಿ ತಪ್ಪಿತಸ್ಠರ ವಿರುದ್ಧ ಕ್ರಮಕೈಗೊಳ್ಳಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಜನವರಿ 23 ಸೋಮವಾರ 24 ಗಂಟೆಗಳ ಮುಷ್ಕರವನ್ನು ನಡೆಸಲು ವಯನಾಡ್ ಕಲ್ಪಟ್ಟದಲ್ಲಿ ಸೇರಿದ್ದ ಆಲ್ ಕೇರಳ ಫೆಡರೇಷನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ ರಾಜ್ಯ ಎಕ್ಸಿಕ್ಯೂಟಿವ್ ಸಮಿತಿ ತೀರ್ಮಾನಿಸಿದೆ.

ವಯನಾಡ್‌ನಲ್ಲಿ ಹೊಸ ಬಂಕ್‌ಗಳಿಗೆ ಎನ್‌ಒಸಿ ಕೊಟ್ಟಿದೆ.ಆನಂತರ ಆಯಿಲ್ ಕಂಪೆನಿ ಕಾನೂನು ಉಲ್ಲಂಘಿಸುತ್ತಲೇ ಇದೆ. ಎನ್‌ಒಸಿಯನ್ನು ಅಯಿಲ್ ಕಂಪೆನಿಯ ರಾಜ್ಯದ ಅತ್ಯುನ್ನತ ಅಧಿಕಾರಿ ನೀಡುತ್ತಾರೆ.ಆದ್ದರಿಂದ ಕಾನೂನು ಉಲ್ಲಂಘನೆಯ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಆಯಿಲ್ ಕಂಪೆನಿಗೆ ಸಾಧ್ಯವಿಲ್ಲ ಎಂದು ಸಮಿತಿ ಆರೋಪಿಸಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News