ಹೌದು,ಸರ್ ನೀವೇ ದೊಡ್ಡ ತಮಾಷೆ: ಮೋದಿಗೆ ಬರೆದ ತೀಕ್ಷ್ಣ ಕಮೆಂಟ್ ವೈರಲ್
Update: 2017-01-19 14:49 IST
ಹೊಸದಿಲ್ಲಿ,ಜ.19: ಪ್ರಧಾನ ಮಂತ್ರಿ ನರೇಂದ್ರಮೋದಿ ಟ್ವೀಟ್‌ಗೆ ತೀಕ್ಷ್ಣ ಉತ್ತರ ನೀಡಿದ ಉತ್ತರ ಪ್ರದೇಶಿಗನ ಕಮೆಂಟ್ ವೈರಲ್ ಆಗಿದೆ. ಜನವರಿ 14ರ ತಮಾಷೆ ಕುರಿತು ಮೋದಿಯ ಟ್ವೀಟ್‌ಗೆ ತೀಕ್ಷ್ಣ ಉತ್ತರ ಲಭಿಸಿದೆ.
ನಮಗೆ ಕೆಲವು ತಮಾಷೆಗಳು,ಹಾಸ್ಯಗಳು ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ತಮಾಷೆ ಜೀವನದಲ್ಲಿ ಸಂತೋಷ ತರುತ್ತದೆ ಅದು ಅತಿನೋವನ್ನು ಇಲ್ಲದಾಗಿಸುತ್ತದೆ ಎಂದು ಮೋದಿ ಟ್ವೀಟ್ ಮಾಡಿದ್ದರು.
ಉತ್ತರವಾಗಿ ಅದೇ ಸರ್, ನೀವೇ ದೇಶದ ದೊಡ್ಡ ತಮಾಷೆ, ನಾನು ಅಭಿನಂದಿಸುತ್ತೇನೆ. ಹಲವಾರು ದೇಶಗಳು ನಮ್ಮ ದೇಶವನ್ನು ನೋಡಿ ಈಗ ನಗುತ್ತಿವೆ ಎಂದು ಉತ್ತರ ಪ್ರದೇಶದ ವೈಭವ್ ಮಹೇಶ್ವರಿ ಕಮೆಂಟ್ ಹಾಕಿದ್ದಾರೆಂದು ವರದಿ ತಿಳಿಸಿದೆ.