ಇಟಲಿ: ಸ್ಕಿ ಹೊಟೇಲ್‌ಗೆ ಅಪ್ಪಳಿಸಿದ ನೀರ್ಗಲ್ಲು; 30 ಮಂದಿ ನಾಪತ್ತೆ
Update: 2017-01-19 20:34 IST
ರೋಮ್, ಜ. 19: ಮಧ್ಯ ಇಟಲಿಯಲ್ಲಿರುವ ಸ್ಕಿ ಹೊಟೇಲ್ ಒಂದಕ್ಕೆ ಬೃಹತ್ ನೀರ್ಗಲ್ಲೊಂದು ಅಪ್ಪಳಿಸಿದಾಗ ಹಲವಾರು ಮಂದಿ ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಗುರುವಾರ ವರದಿ ಮಾಡಿವೆ.
ಮೊದಲ ರಕ್ಷಣಾ ತಂಡ 10 ಕಿಲೋಮೀಟರ್ ಕ್ರಾಸ್ ಕಂಟ್ರಿ ಸ್ಕಿ ನಡೆಸಿ ದುರಂತ ಸ್ಥಳವನ್ನು ತಲುಪಿದೆ. ಈ ವಲಯದಲ್ಲಿ ಬುಧವಾರ ಬೆಳಗ್ಗೆ ನಾಲ್ಕು ಬಾರಿ ಶಕ್ತಿಶಾಲಿ ಭೂಕಂಪ ಸಂಭವಿಸಿತ್ತು. ಅದರ ಪರಿಣಾಮವಾಗಿ ಗ್ರಾನ್ ಸಾಸೊ ಬೆಟ್ಟದ ಪೂರ್ವ ತಪ್ಪಲಿನಲ್ಲಿರುವ ಹೊಟೇಲ್ ರಿಗೊಪಿಯಾನೊ ಮೇಲೆ ನೀರ್ಗಲ್ಲು ಅಪ್ಪಳಿಸಿತು. ಈ ಸಂದರ್ಭದಲ್ಲಿ ಹೊಟೇಲ್‌ನಲ್ಲಿ ಅತಿಥಿಗಳು ಮತ್ತು ಸಿಬ್ಬಂದಿ ಸೇರಿದಂತೆ 30 ಮಂದಿ ಇದ್ದರು ಎಂದು ಇಟಲಿಯ ನಾಗರಿಕ ರಕ್ಷಣೆ ಸಂಸ್ಥೆ ತಿಳಿಸಿದೆ.
ಇಬ್ಬರನ್ನು ರಕ್ಷಿಸಲಾಗಿದೆ ಎಂದು ಪೆಸ್ಕರ ಪ್ರಾಂತದ ಅಧ್ಯಕ್ಷ ಆಂಟೋನಿಯೊ ಡಿ ಮಾರ್ಕೊ ಹೇಳಿದರು.