ಚೀನಾದಲ್ಲಿ ರೋಬಟ್ ಪತ್ರಕರ್ತನ ಜನನ
Update: 2017-01-19 20:49 IST
ಬೀಜಿಂಗ್, ಜ. 19: ಚೀನಾದ ದಿನಪತ್ರಿಕೆಯೊಂದರಲ್ಲಿ ಗುರುವಾರ ರೋಬಟ್ ಪತ್ರಕರ್ತ ಒಂದರ ವರದಿ ಪ್ರಕಟಗೊಂಡಿದೆ. ಅದು 300 ಅಕ್ಷರಗಳ ಲೇಖನವೊಂದನ್ನು ಕೇವ ಒಂದು ಸೆಕೆಂಡ್‌ನಲ್ಲಿ ಬರೆದಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
ವಸಂತ ಕಾಲದ ಹಬ್ಬಗಳ ಸಂದರ್ಭದಲ್ಲಿ ಪ್ರವಾಸಿಗರ ಧಾವಂತ ಎಂಬ ವಿಷಯದಲ್ಲಿ ರೋಬಟ್ ಪತ್ರಕರ್ತ ಈ ಲೇಖನ ಬರದಿದೆ.
ರೋಬಟ್ ‘ಕ್ಸಿಯಾವೊ ನನ್’ ಕೇವಲ ಒಂದು ಸೆಕೆಂಡ್‌ನಲ್ಲಿ ತನ್ನ ಲೇಖನ ಬರೆದಿದೆ. ಸಣ್ಣ ಮತ್ತು ದೊಡ್ಡ ವರದಿಗಳೆರಡನ್ನೂ ಬರೆಯುವ ಸಾಮರ್ಥ್ಯವನ್ನು ಅದು ಹೊಂದಿದೆ ಎಂದು ಪೆಕಿಂಗ್ ವಿಶ್ವವಿದ್ಯಾನಿಲಯ ಪ್ರೊಫೆಸರ್ ವಾನ್ ಕ್ಸಿಯಾವೊಜುನ್ ತಿಳಿಸಿದರು.
‘‘ಇತರ ವರದಿಗಾರರಿಗೆ ಹೋಲಿಸಿದರೆ ರೋಬಟ್ ವರದಿಗಾರ ಉತ್ತಮ ಮಾಹಿತಿ ವಿಶ್ಲೇಷಣೆ ಸಾಮರ್ಥ್ಯವನ್ನು ಹೊಂದಿದೆ ಹಾಗೂ ಅದು ವರದಿಗಳನ್ನು ಕ್ಷಿಪ್ರವಾಗಿ ಬರೆಯುತ್ತದೆ.