ಫೆ.1ರಂದು ಕೇಂದ್ರ ಬಜೆಟ್ ಮಂಡನೆ
ಹೊಸದಿಲ್ಲಿ, ಜ.19: ವಿವಿಧೆಡೆಗಳಿಂದ ವ್ಯಕ್ತವಾದ ವಿರೋಧವನ್ನು ಲೆಕ್ಕಿಸದ ಕೇಂದ್ರ ಸರಕಾರ 2017-18ರ ಮುಂಗಡ ಪತ್ರವನ್ನು ಫೆಬ್ರವರಿ 1ರಂದೇ ಮಂಡಿಸುವುದಾಗಿ ತಿಳಿಸಿದೆ.
ಆದರೆ ಚುನಾವಣೆ ಎದುರಿಸುತ್ತಿರುವ ಪಂಜಾಬ್, ಉತ್ತರಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರ ರಾಜ್ಯಗಳಿಗೆ ಸಂಬಂಧಿಸಿದಂತೆ ಯಾವುದೇ ಘೋಷಣೆಗಳನ್ನು ಬಜೆಟ್‌ನಲ್ಲಿ ಮಾಡಲಾಗುವುದಿಲ್ಲ ಎಂದು ಉನ್ನತ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಫೆಬ್ರವರಿ ತಿಂಗಳ ಅಂತಿಮ ದಿನದಂದು ಬಜೆಟ್ ಮಂಡಿಸುವ ಸಂಪ್ರದಾಯವನ್ನು ಬದಿಗೆ ಸರಿಸಿ, ಫೆ.1ರಂದೇ ಬಜೆಟ್ ಮಂಡಿಸಲು ಕೇಂದ್ರ ಸರಕಾರ ನಿರ್ಧರಿಸಿತ್ತು. ಇದನ್ನು ವಿರೋಧಿಸಿ ವಿಪಕ್ಷಗಳು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದವು. ಬಜೆಟ್ ಮಂಡಿಸಿದರೆ ಪಂಚ ರಾಜ್ಯಗಳ ಚುನಾವಣೆಯಲ್ಲಿ ಕೇಂದ್ರದ ಆಡಳಿತ ಪಕ್ಷಕ್ಕೆ ಹೆಚ್ಚಿನ ಅನುಕೂಲವಾಗಲಿದ್ದು ಈ ಹಿನ್ನೆಲೆಯಲ್ಲಿ ಫೆ.1ರಂದು ಬಜೆಟ್ ಮಂಡಿಸಲು ಅವಕಾಶ ನೀಡಬಾರದೆಂದು ವಿಪಕ್ಷಗಳು ಒತ್ತಾಯಿಸಿದ್ದವು.
ಈ ಕುರಿತಾದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಜ.20ರಂದು ನಡೆಸುವ ನಿರೀಕ್ಷೆಯಿದೆ. ಬಜೆಟ್ ಅಧಿವೇಶನ ಜ.31ರಂದು ಆರಂಭಗೊಳ್ಳಲಿದೆ.