ನ್ಯಾಯಬೆಲೆ ಅಂಗಡಿ ಧಾನ್ಯದಲ್ಲಿ ಹಕ್ಕಿ ಹಿಕ್ಕೆ: ಅಧಿಕಾರಿಗಳ ವಿರುದ್ಧ ಗ್ರಾಹಕರ ಆಕ್ರೋಶ

Update: 2017-01-19 18:43 GMT

ವಿಟ್ಲ, ಜ.19: ನ್ಯಾಯಬೆಲೆ ಅಂಗಡಿಯಲ್ಲಿ ದೊರೆತ ಗೋಯಲ್ಲಿ ಇರುವೆ ಹಾಗೂ ಪಕ್ಷಿಗಳ ಹಿಕ್ಕೆ ಪತ್ತೆಯಾಗಿದ್ದರಿಂದ ಗ್ರಾಹಕರು ಸರಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ವಿಟ್ಲದಲ್ಲಿ ನಡೆದಿದೆ.

ವಿಟ್ಲದ ಪುರಭವನದ ಬಳಿಯಿರುವ ನ್ಯಾಯಬೆಲೆ ಅಂಗಡಿಯಲ್ಲಿ ಗ್ರಾಹಕರು ಗೋಗಳನ್ನು ಖರೀದಿಸಿದಾಗ ಅದರಲ್ಲಿ ಪಾರಿವಾಳಗಳ ಹಿಕ್ಕೆ ಹಾಗೂ ಇರುವೆಗಳು ಪತ್ತೆಯಾಗಿದ್ದು, ಇದರಿಂದ ಆಕ್ರೋಶಿತರಾದ ಗ್ರಾಹಕರು ಅಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಕೆಲವು ದಿನಗಳ ಹಿಂದೆ 40 ಚೀಲ ಗೋ ಇಲ್ಲಿಗೆ ಬಂದಿದ್ದು, ಅದರಲ್ಲಿರುವ ಗೋಯು ಕಳಪೆ ಗುಣಪಟ್ಟದಿಂದ ಕೂಡಿದೆ. ಇದನ್ನು ನಮ್ಮ ಮನೆಗೆ ಹೇಗೆ ಕೊಂಡೊಯ್ಯುವುದು ಎಂದು ದೂರಿದರು. ಸರಕಾರ ಬಡವರಿಗೆ ಉಚಿತವಾಗಿ ನೀಡುವ ಗೋ, ಅಕ್ಕಿಗಳನ್ನು 3-4 ಕಿ.ಮೀ. ದೂರದಿಂದ ಬಂದು ತೆಗೆದುಕೊಂಡು ಹೋಗುತ್ತಿದ್ದೇವೆ. ಆದರೆ ಸಾಮಗ್ರಿಗಳು ಕಳಪೆ ಗುಣಪಟ್ಟದಿಂದ ಕೂಡಿದಲ್ಲದೆ ಇದರಲ್ಲಿ ಹೆಗ್ಗಣ ಹಿಕ್ಕೆ, ಕಸಕಡ್ಡಿಗಳು, ದೂಳುಗಳು ಸೇರಿದೆ ಎಂದು ಆರೋಪಿಸಿದರು. ಸರಕಾರ ಕೂಪನ್ ವ್ಯವಸ್ಥೆ ಜಾರಿಗೆ ತಂದಿದ್ದು, ಮೂರ್ನಾಲ್ಕು ದಿನಗಳ ಕಾಲ ನ್ಯಾಯಬೆಲೆ ಅಂಗಡಿಯಲ್ಲಿ ಅಲೆದಾಡುವ ಪರಿಸ್ಥಿತಿ ಬಂದಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News