ಕೇರಳದಲ್ಲಿ ಸಮಗ್ರ ಆರೋಗ್ಯ ನೀತಿ ಜಾರಿ: ಪಿಣರಾಯಿ

Update: 2017-01-19 18:45 GMT

 ಕಾಸರಗೋಡು, ಜ.19: ಬಡವರಿಗೆ ಉನ್ನತ ಮಟ್ಟದ ಚಿಕಿತ್ಸೆ ಲಭಿಸಲು ಸಮಗ್ರ ಆರೋಗ್ಯ ನೀತಿಯನ್ನು ರಾಜ್ಯ ಸರಕಾರ ಜಾರಿಗೆ ತರಲಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.

  ಗುರುವಾರ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಎಂಡೋಸಲಾನ್ ಸಂತ್ರಸ್ತರಿಗಿರುವ ವಿಶೇಷ ಯೋಜನೆಯಡಿ ನಬಾರ್ಡ್ ಸಹಯೋಗದೊಂದಿಗೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನಿರ್ಮಿಸುವ ಆಸ್ಪತ್ರೆ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡುತ್ತಿದ್ದರು.

 ಒಂದೂವರೆ ದಶಕಗಳ ಹಿಂದೆ ನಿಷೇಸಿದ ಎಂಡೋ ಸಲಾನ್‌ನ ದುಷ್ಪರಿಣಾಮ ಇಂದಿಗೂ ಜನತೆಯನ್ನು ಕಾಡುತ್ತಿದೆ. ಸಂತ್ರಸ್ತರಿಗೆ ಚಿಕಿತ್ಸೆ ಪಡೆಯಲು ಸೂಕ್ತ ವೈದ್ಯಕೀಯ ಸೇವೆ ಲಭಿಸುತ್ತಿಲ್ಲ. ಆವಶ್ಯಕ ಚಿಕಿತ್ಸೆಗಾಗಿ ಮಂಗಳೂರು ಅಥವಾ ಇತರೆಡೆಗಳಲ್ಲಿ ಇರುವ ಆಸ್ಪತ್ರೆಯನ್ನು ಅವಲಂಬಿಸುವ ಸ್ಥಿತಿಯು ಕಾಸರಗೋಡಿನ ಜನತೆಯದ್ದಾಗಿದೆ. ಇದರಿಂದ ಕಾಸರಗೋಡಿನಲ್ಲಿ ಸುಸಜ್ಜಿತ ಆಸ್ಪತ್ರೆ ಆರಂಭಿಸಲು ಸರಕಾರ ಮುಂದಾಗಿದೆ ಎಂದು ಹೇಳಿದರು.

ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಟೀಚರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಂದಾಯ ಸಚಿವ ಇ.ಚಂದ್ರಶೇಖರನ್, ಸಂಸದ ಪಿ.ಕರುಣಾಕರನ್, ಶಾಸಕರಾದ ಎನ್.ಎ. ನೆಲ್ಲಿಕುನ್ನು, ಪಿ.ಬಿ.ಅಬ್ದುರ್ರಝಾಕ್, ಕೆ. ಕುಂಞಿರಾಮನ್, ಎಂ. ರಾಜಗೋಪಾಲ್, ಜಿಲ್ಲಾಕಾರಿ ಕೆ.ಜೀವನ್ ಬಾಬು, ಕಾಸರಗೋಡು ನಗರಸಭಾ ಅಧ್ಯಕ್ಷೆ ಬೀಾತಿಮ ಇಬ್ರಾಹೀಂ, ಬ್ಲಾಕ್ ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಕುಂಞಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News