×
Ad

ತೃಪ್ತಿದೇಸಾಯಿ ಇಡುಕ್ಕಿಯಲ್ಲಿದ್ದಾರೆ: ವದಂತಿ

Update: 2017-01-20 12:03 IST

ತೊಡುಪುಝ, ಜ.20: ತೃಪ್ತಿದೇಸಾಯಿ ಇಡುಕ್ಕಿಯಲ್ಲಿದ್ದಾರೆ ಎಂದು ವದಂತಿ ಹರಡಿದೆ. ತೊಡುಪುಝ,, ಮೂಲಮಟ್ಟಂ ರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ಬಿಳಿ ಸ್ವಿಫ್ಟ್ ಕಾರ್‌ನಲ್ಲಿ ಪ್ರಯಾಣಿಸಿದ್ದನ್ನು ನೋಡಿದ್ದೇನೆ ಎಂದು ಶಬರಿ ಮಲೆ ತೀರ್ಥಯಾತ್ರಿಕರೊಬ್ಬರು ಸ್ಪೆಷಲ್ ಬ್ರಾಂಚ್‌ಗೆ ತಿಳಿಸಿದ್ದು, ಪೊಲೀಸರು ಕಟ್ಟೆಚ್ಚರ ಪಾಲಿಸಲು ಆದೇಶಿಸಲಾಗಿದೆ.

ಭೂಮಾತಾ ಬ್ರಿಗೇಡ್ ನಾಯಕಿ ತೃಪ್ತಿ ದೇಸಾಯಿ ನಿಷೇಧ ಉಲ್ಲಂಘಿಸಿ ಶಬರಿಮಲೆಗೆ ಪ್ರವೇಶಿಸುವೆ ಎಂದು ಈಹಿಂದೆಯೇ ಘೋಷಿಸಿದ್ದರು.

 ತೃಪ್ತಿದೇಸಾಯಿ ಸಾಗಬಹುದಾದ ರಸ್ತೆಗಳೆಲ್ಲೆಲ್ಲ ಪೊಲೀಸರು ಬಿಗು ತಪಾಸಣೆ ನಡೆಸುತ್ತಿದ್ದಾರೆ. ಇದೇ ವೇಳೆ ತೃಪ್ತಿದೇಸಾಯಿಯನ್ನು ನೋಡಿದ್ದೇವೆ ಎಂದು ಸ್ಪೆಷಲ್ ಬ್ರಾಂಚ್‌ಗೆ ವಿವರ ದೊರಕಿದೆ. ಮೇಲುಕ್ಕಾವ್, ಈರಾಟ್ಟ್‌ಪೇಟ, ಎರುಮೇಲಿ ಪ್ರದೇಶಗಳಲ್ಲಿ ತೃಪ್ತಿ ಹೋಗುವ ಸಾಧ್ಯತೆಯದೆ ಎಂದು ಕೋಟ್ಟಯಂ, ಪತ್ತನಂತಿಟ್ಟ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಮಾಹಿತಿ ನೀಡಲಾಗಿದೆ.

ಶಬರಿಮಲೆಗೆ ಹೋಗುವ ಉದ್ದೇಶದಿಂದ ತೃಪ್ತಿ ದೇಸಾಯಿ ಸಂಚರಿಸಲು ಸಾಧ್ಯವಿರುವ ರಸ್ತೆಗಳಲ್ಲಿ ಬಿಗು ಭದ್ರತೆ ಏರ್ಪಡಿಸಲಾಗಿದೆ. ಆದರೆ ತೃಪ್ತಿ ದೇಸಾಯಿ ಇಡುಕ್ಕಿಗೆ ಬಂದಿರುವುದು ಇನ್ನೂ ದೃಢವಾಗಿಲ್ಲ ಎಂದು ಇಡುಕ್ಕಿ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News