×
Ad

ನೋಟು ಅಮಾನ್ಯ ರಾಜಕೀಯ ನಿರ್ಧಾರವೇ ಹೊರತು ಆರ್ಥಿಕ ನಿರ್ಧಾರವಲ್ಲ: ಬಾರು

Update: 2017-01-20 21:10 IST

ಜೈಪುರ,ಜ.20: ತನ್ನ ಅಧಿಕಾರಾವಧಿಯ ಅರ್ಧ ಹಾದಿಯನ್ನು ಕ್ರಮಿಸಿರುವ ಬಿಜೆಪಿ ಸರಕಾರದ ಬಳಿ ಪ್ರಮುಖವಾಗಿ ಬಿಂಬಿಸಲು ನೋಟು ಅಮಾನ್ಯದ ಹೊರತು ಬೇರೆ ಏನೂ ಇಲ್ಲ. ನೋಟು ಅಮಾನ್ಯವು ರಾಜಕೀಯ ನಿರ್ಧಾರವಾಗಿದೆಯೇ ಹೊರತು ರಾಜಕೀಯ ನಿರ್ಧಾರವಲ್ಲ ಎಂದು ಲೇಖಕ-ಟೀಕಾಕಾರ ಸಂಜಯ್ ಬಾರು ಅವರು ಇಂದಿಲ್ಲಿ ಹೇಳಿದರು.

ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಮಾಧ್ಯಮ ಸಲಹೆಗಾರರಾಗಿದ್ದ ಬಾರು ಇಲ್ಲಿ ನಡೆಯುತ್ತಿರುವ ಜೈಪುರ ಸಾಹಿತ್ಯೋತ್ಸವದಲ್ಲಿ ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರ ಜೀವನ ಚರಿತ್ರೆಯ ಲೇಖಕ ವಿನಯ್ ಸೇನಾಪತಿ ಅವರೊಂದಿಗೆ ಸಂವಾದದಲ್ಲಿ ಭಾಗಿಯಾಗಿದ್ದರು.
ನೋಟು ಅಮಾನ್ಯದ ರಾಜಕೀಯ ನಿರ್ಧಾರದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತನ್ನನ್ನು ಪ್ರಬಲ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಎಂದು ಬಿಂಬಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದ ಅವರು, ಜನರಿಂದ ಹತ್ತು ವರ್ಷಗಳ ಸಮಯಾವಕಾಶವನ್ನು ಕೋರಿ ಮೋದಿ ತಪ್ಪು ಮಾಡಿದ್ದಾರೆ. ಅವರ ಅರ್ಧ ಅಧಿಕಾರವಧಿಯು ಮುಗಿದಿದೆ ಮತ್ತು ನೋಟು ಅಮಾನ್ಯವನ್ನು ಬಿಟ್ಟರೆ ಪ್ರಮುಖವಾಗಿ ಬಿಂಬಿಸಿಕೊಳ್ಳಲು ಸರಕಾರದ ಬಳಿ ಯಾವುದೇ ವಿಷಯವಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News