ಪಲಿಮಾರು ಶ್ರೀಗಳ ಪರ್ಯಾಯಕ್ಕೆ ಅಕ್ಕಿ ಮುಹೂರ್ತ

Update: 2017-01-20 17:15 GMT

ಉಡುಪಿ, ಜ.20: ಮುಂದಿನ ವರ್ಷದ ಜನವರಿ 18ರ ಮುಂಜಾನೆ ನಡೆಯುವ ಉಡುಪಿ ಶ್ರೀಕೃಷ್ಣ ಮಠದ ಮುಂದಿನ ಪರ್ಯಾಯ ಮಹೋತ್ಸವದಲ್ಲಿ ಸರ್ವಜ್ಞ ಪೀಠಾರೋಹಣ ಮಾಡಲಿರುವ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರ ಪರ್ಯಾಯದ ಪೂರ್ವಭಾವಿ ಸಿದ್ಧತೆಗಳಲ್ಲಿ ಎರಡನೇಯದಾದ ಅಕ್ಕಿ ಮುಹೂರ್ತ ಇಂದು ಬೆಳಗ್ಗೆ ರಥಬೀದಿ ಯಲ್ಲಿರುವ ಪಲಿಮಾರು ಮಠದಲ್ಲಿ ನಡೆಯಿತು.

ಭಾವಿ ಪರ್ಯಾಯ ಮಠಾಧೀಶರಾದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಉಪಸ್ಥಿತಿಯಲ್ಲಿ ಅಕ್ಕಿ ಮುಹೂರ್ತದ ಸಾಂಪ್ರದಾಯಿಕ ವಿಧಿವಿಧಾನಗಳು ನಡೆದವು. ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರನ್ನು ಹೊರತು ಪಡಿಸಿ ಉಳಿದೆಲ್ಲಾ ಆರು ಮಠಗಳ ಶ್ರೀಪಾದರು ಹಾಗೂ ಕಿರಿಯ ಯತಿಗಳು ಇಂದಿನ ಅಕ್ಕಿ ಮುಹೂರ್ತದಲ್ಲಿ ಪಾಲ್ಗೊಂಡರು. ಅಪರಾಹ್ನದ ಬಳಿಕ ಶ್ರೀಸುಗುಣೇಂದ್ರ ತೀರ್ಥರು ಬಂದು ಮಠದ ಗೌರವನ್ನು ಸ್ವೀಕರಿಸಿದರು.

 ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರನ್ನು ಹೊರತು ಪಡಿಸಿ ಉಳಿದೆಲ್ಲಾ ಆರು ಮಠಗಳ ಶ್ರೀಪಾದರು ಹಾಗೂ ಕಿರಿಯ ಯತಿಗಳು ಇಂದಿನ ಅಕ್ಕಿ ಮುಹೂರ್ತದಲ್ಲಿ ಪಾಲ್ಗೊಂಡರು. ಅಪರಾಹ್ನದ ಬಳಿಕ ಶ್ರೀಸುಗುಣೇಂದ್ರ ತೀರ್ಥರು ಬಂದು ಮಠದ ಗೌರವನ್ನು ಸ್ವೀಕರಿಸಿದರು. ಪರ್ಯಾಯ ನಡೆಯುವ ಒಂದು ವರ್ಷ ಮೊದಲೇ ಆರಂಭಗೊಳ್ಳುವ ಪೂರ್ವಭಾವಿ ಸಿದ್ಧತೆಗಳಲ್ಲಿ ಅಕ್ಕಿ ಮುಹೂರ್ತ ಎರಡನೇಯದು. ಕಳೆದ ತಿಂಗಳು ಬಾಳೆಮುಹೂರ್ತ ನಡೆದಿದ್ದು, ಇನ್ನು ಮುಂದೆ ಕಟ್ಟಿಗೆ ಮುಹೂರ್ತ ಹಾಗೂ ಪರ್ಯಾಯಕ್ಕೆ ಒಂದು ತಿಂಗಳು ಮೊದಲು ಭತ್ತ ಮುಹೂರ್ತ ನಡೆಯಲಿಕ್ಕಿವೆ.

ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು, ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಶೀರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಶ್ರೀಪಾದರು, ಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು, ಅದಮಾರು ಮಠದ ಹಿರಿಯ ಹಾಗೂ ಕಿರಿಯ ಯತಿಗಳಾದ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪರ್ಯಾಯದ ಎರಡು ವರ್ಷಗಳ ಅವಧಿಯಲ್ಲಿ ನಡೆಯುವ ಅನ್ನ ದಾಸೋಹಕ್ಕಾಗಿ ಬೇಕಾದ ಅಕ್ಕಿ ಹಾಗೂ ಧಾನ್ಯಗಳನ್ನು ಸಂಗ್ರಹಿಸಿಡುವುದಕ್ಕಾಗಿ ಅಕ್ಕಿ ಮುಹೂರ್ತ ನಡೆಯುತ್ತದೆ. ಸಂಪ್ರದಾಯದಂತೆ ಇಂದು ಮುಂಜಾನೆ ರಥಬೀದಿಯಲ್ಲಿರುವ ಪಲಿಮಾರು ಮಠದಲ್ಲಿ ಶ್ರೀಗಳ ನೇತೃತ್ವದಲ್ಲಿ ನವಗ್ರಹ ಪೂಜೆ ಹಾಗೂ ಪಟ್ಟದ ದೇವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು.

ಅನಂತರ ಮಠದ ದಿವಾನರ ನೇತೃತ್ವದಲ್ಲಿ ಊರಿನ ಗಣ್ಯರು, ಮಠದ ಅಭಿಮಾನಿಗಳು ಸಕಲ ಬಿರುದು ಬಾವಲಿಗಳೊಂದಿಗೆ ಮೆರವಣಿಗೆಯಲ್ಲಿ ತೆರಳಿ ಚಂದ್ರವೌಳೀಶ್ವರ, ಶ್ರೀಅನಂತೇಶ್ವರ ದೇವರಿಗೆ ಪಾರ್ಥಿಸಿ, ಬಳಿಕ ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣ ಮತ್ತು ಮುಖ್ಯಪ್ರಾಣರಿಗೆ, ಸರ್ವಜ್ಞ ಪೀಠದಲ್ಲಿರುವ ಶ್ರೀಮಧ್ವಾಚಾರ್ಯರಿಗೆ, ವಾದಿರಾಜರಿಗೆ ಪಾರ್ಥಿಸಲಾಯಿತು.

ಬಳಿಕ ಪೇಜಾವರ ಮಠದಿಂದ ಸಾಲಂಕೃತವಾದ 108 ಅಕ್ಕಿ ಮುಡಿಗಳನ್ನು ಪಲ್ಲಕ್ಕಿಯಲ್ಲಿರಿಸಿ ತಲೆಹೊರೆಯ ಮೂಲಕ ಬಿರುದು ಬಾವಲಿಗಳೊಂದಿಗೆ ರಥಬೀದಿಗೆ ಪ್ರದಕ್ಷಿಣೆ ಬಂದು ಪಲಿಮಾರು ಮಠದಲ್ಲಿ ಪಟ್ಟದ ದೇವರ ಎದುರು ಅಕ್ಕಿಮುಡಿಯನ್ನಿರಿಸಿ ಆರತಿ ಬೆಳಗುವ ಮೂಲಕ ಕಾರ್ಯಕ್ರಮ ಸಂಪನ್ನಗೊಂಡಿತು. ಬಳಿಕ ಆಗಮಿಸಿದ ಎಲ್ಲಾ ಶ್ರೀಪಾದರುಗಳಿಗೆ ಪೇಜಾವರ ಮಠದ ವತಿಯಿಂದ ಗೌರವ ಸಮರ್ಪಿಸಲಾಯಿತು.

ತಿರುಪತಿ ದೇವಸ್ಥಾನ, ಮುಳುಬಾಗಿಲು ಮಠದಿಂದ ಪ್ರಸಾದವನ್ನು ಸಮರ್ಪಿಸಲಾಯಿತು. ಶಾಸಕ ವಿನಯ ಕುಮಾರ ಸೊರಕೆ, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಮಾಜಿ ಶಾಸಕರಾದ ಕೆ. ರಘುಪತಿ ಭಟ್, ಯು.ಆರ್. ಸಭಾಪತಿ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮೊದಲಾದವರು ಪಾಲ್ಗೊಂಡಿದ್ದರು. ತಿರುಪತಿ ದೇವಸ್ಥಾನ, ಮುಳುಬಾಗಿಲು ಮಠದಿಂದ ಪ್ರಸಾದವನ್ನು ಸಮರ್ಪಿಸಲಾಯಿತು. ಶಾಸಕ ವಿನಯ ಕುಮಾರ ಸೊರಕೆ, ನಗರಸ್ಯಾಕ್ಷೆ ಮೀನಾಕ್ಷಿ ಮಾವಬನ್ನಂಜೆ,ಮಾಜಿಶಾಸಕರಾದಕೆ.ರಘುಪತಿಟ್, ಯು.ಆರ್. ಸಾಪತಿ,ಬಿಜೆಪಿಜಿಲ್ಲ್ಯಾಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮೊದಲಾದವರು ಪಾಲ್ಗೊಂಡಿದ್ದರು.

ನಾಲ್ಕು ಕೃತಿಗಳ ಬಿಡುಗಡೆ,ಸಹಾಯವಾಣಿಗೆ ಚಾಲನೆ
 ಸಮಾರಂಭದಲ್ಲಿ ಒಟ್ಟು ನಾಲ್ಕು ಕೃತಿಗಳನ್ನು ವಿವಿಧ ಸ್ವಾಮೀಜಿಗಳು ಬಿಡುಗಡೆ ಗೊಳಿಸಿದರು. ಉಡುಪಿಯ ಅಷ್ಟಮಠಗಳಲ್ಲಿ ಲಭ್ಯವಿರುವ ತುಳುಲಿಪಿಯ ತಾಳೆಗರಿಯ ಮಹಾಭಾರತದ ಮೂಲಪ್ರತಿಗಳಿಗೆ ಅನ್ವಯಗೊಂಡು ಮೈಸೂರಿನ ವಿದ್ವಾಂಸ ಶೇಷಗಿರಿ ಆಚಾರ್ಯರು ರಚಿಸಿದ ‘ವನಪರ್ವ’ ಗ್ರಂಥದ ನಾಲ್ಕು ಸಂಪುಟಗಳನ್ನು, ಬೆಂಗಳೂರಿನ ಸತ್ಯಗಿರಿ ಧೀರೇಂದ್ರ ಆಚಾರ್ಯರು ರಚಿಸಿದ ನ್ಯಾಯಶಾಸ್ತ್ರದ ‘ಪ್ರಾಮಾಣ್ಯವಾದ’ದ ಸಂಸ್ಕೃತ ವ್ಯಾಖ್ಯಾನ ಗ್ರಂಥ, ಸಗ್ರಿ ರಾಘವೇಂದ್ರ ಉಪಾಧ್ಯರು ಬರೆದ ಶ್ರೀಮದ್ಭಾಗವತದಲ್ಲಿ ಬರುವ ಕೃಷ್ಣನ ಸ್ತೋತ್ರ ಹಾಗೂ ಪರ್ಯಾಯ ಮಠದ ಪಂಚಾಂಗವನ್ನು ಬಿಡುಗಡೆಗೊಳಿಸಲಾಯಿತು.

ಸಹಾಯವಾಣಿ ಚಾಲನೆ:

ಪಲಿಮಾರು ಶ್ರೀಗಳ ಪರ್ಯಾಯ ಸಂಚಾರದಲ್ಲಿ ಬೇಕಾದ ಮಾಹಿತಿಯನ್ನು ಕೊಡುವ ಸಹಾಯವಾಣಿಯನ್ನು (9483992530) ಅದಮಾರು ಕಿರಿಯ ಶ್ರೀಪಾದರು ಬಿಡುಗಡೆಗೊಳಿಸಿದರು.

ಶ್ರೀಕೃಷ್ಣ ಮಠದಲ್ಲಿ ಎಲ್ಲ ಪರ್ಯಾಯ ಮಠಾಧೀಶರಿಂದಲೂ ಎಲ್ಲರಿಗೂ ಅನ್ನದಾನ ನಡೆಯುತ್ತಿದೆ. ಪಲಿಮಾರು ಶ್ರೀಗಳು ಚಿಣ್ಣರ ಸಂತರ್ಪಣೆ ಯೋಜನೆಯನ್ನು ಆರಂಭಿಸಿದವರು. ಇನ್ನು ಮುಂದೆಯೂ ಅವರಿಂದ ಉತ್ತಮ ಕೆಲಸಗಳು ನಡೆಯುವಂತಾಗಲಿ ಎಂದು ಪೇಜಾವರ ಶ್ರೀಗಳು ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News