ಅಮೆರಿಕನ್ನರ ಮೂಲಕ ಹೊಸ ಅಮೆರಿಕ ನಿರ್ಮಾಣ: ಟ್ರಂಪ್

Update: 2017-01-20 17:44 GMT

ವಾಷಿಂಗ್ಟನ್, ಜ.20: ಇದು ಅಮೆರಿಕದ ಜನತೆಯ ಸಂಭ್ರಮದ ದಿನ. ಇಂದು ನಾವು ನಿಮಗೆ ಅಧಿಕಾರ ನೀಡುತ್ತಿದ್ದೇವೆ. ಇಂದಿನಿಂದಲೇ ದೇಶದ ಜನರೇ ಆಡಳಿತಗಾರರು. ಅಮೆರಿಕನ್ನರ ಮೂಲಕ ಹೊಸ ಅಮೆರಿಕ ನಿರ್ಮಾಣ ನಮ್ಮ ಗುರಿಯಾಗಿದೆ   ಎಂದು ಅಮೆರಿಕದ 45ನೆ  ಅಧ್ಯಕ್ಷರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್  ಹೇಳಿದರು.

ಅಮೆರಿಕ,ಜಗತ್ತಿನ ಜನರಿಗೆ ಧನ್ಯವಾದಗಳು.ಇಂದಿನ ಕಾರ್ಯಕ್ರಮ ತುಂಬಾ ವಿಶೇಷವಾದುದು. ಎಲ್ಲ ಬದಲಾವಣೆಗಳು ವಾಷಿಂಗ್ಟನ್ ಡಿಸಿಯಿಂದಲೇ ಆರಂಭವಾಗಲಿದೆ. ಜನರ ಅಭಿವೃದ್ಧಿಯೇ ನಮ್ಮೆಲ್ಲರ  ಅಭಿವೃದ್ಧಿಯಾಗಿದೆ.ದೇಶದಲ್ಲಿ ಅಭಿವೃದ್ಧಿಯ ಪರ್ವಕಾಲ ಇನ್ನು ಆರಂಭವಾಗಲಿದೆ.ಹಿಂದಿನದ್ದನ್ನು ಮರೆತು ಭವಿಷ್ಯದ ಕಡೆಗೆ ಯೋಚಿಸಬೇಕಾಗಿದೆ ಎಂದರು

 ವಿದ್ಯಾರ್ಥಿಗಳು ಕ್ರಿಮಿನಲ್ ಕೃತ್ಯದಲ್ಲಿ ಮುಳುಗಿದ್ದಾರೆ. ಇದು ಕೊನೆಯಾಗಲಿದೆ.ಅಮೆರಿಕದಲ್ಲಿ ನಡೆಯುವ ಲೂಟಿ ನಿಲ್ಲಲಿದೆ ಎಂದು ಅಭಿಪ್ರಾಯಪಟ್ಟರು

ಅಮೆರಿಕದ ಜನರ  ಕನಸು ನಮ್ಮ ಕನಸು. ಹಿಂದಿನ ಆಡಳಿತಗಾರರನ್ನು ಟೀಕಿಸಿದ ಟ್ರಂಪ್ ಅವರ ಅಭಿವೃದ್ಧಿಗೆ ಅವರು ಶ್ರಮಿಸಿದರು ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News