ಬಿಗ್ ಬಝಾರ್‌ನಿಂದ ಅತಿದೊಡ್ಡ ಶಾಪಿಂಗ್ ಕೊಡುಗೆ

Update: 2017-01-20 18:59 GMT

ಮಂಗಳೂರು, ಜ.20: ಈ ಬಾರಿಯ ಗಣರಾಜ್ಯೋತ್ಸವವನ್ನು ಬಿಗ್ ಬಝಾರ್ ಜ.21ರಿಂದ 26ರವರೆಗೆ ‘ಸಬ್ ಸೆ ಸಸ್ತೆ 6 ದಿನ್ ಶಾಪಿಂಗ್’ ಕೊಡುಗೆ ಮೂಲಕ ಸಂಭ್ರಮಿಸುತ್ತಿದೆ. 6 ದಿನಗಳ ಕೊಡುಗೆ ಅವಯಲ್ಲಿ ಅತ್ಯಂತ ಆಕರ್ಷಕ, ಅಗ್ಗದ ಬೆಲೆಗಳಲ್ಲಿ ವ್ಯಾಪಕ ಶ್ರೇಣಿಯ ಉತ್ಪನ್ನಗಳು ಗ್ರಾಹಕರಿಗೆ ದೊರೆಯಲಿವೆ.

ಇದರನ್ವಯ 2,000 ರೂ. ಖರೀದಿಗೆ ಗ್ರಾಹಕರ ಪ್ಯೂಚರ್ ವ್ಯಾಲಿಟ್‌ನಲ್ಲಿ 400 ರೂ. ಜಮೆ ಆಗಲಿದೆ. ಅದೇ ರೀತಿ ಪೇಟಿಎಂ ಬಳಸುವವರಿಗೆ ಸುಲಭ ಇಎಂಐ ಮತ್ತು ರಿಯಾಯಿತಿ ದೊರೆಯಲಿದೆ. ಈ 6 ದಿನಗಳಲ್ಲಿ ಗ್ರಾಹಕರು ್ಯಾಷನ್, ಗೃಹಾಲಂಕಾರ, ಆಹಾರ ಮತ್ತು ಕಿರಾಣಿ ಮತ್ತಿತರ ಅನೇಕ ಬಗೆಗಳ ವಸ್ತುಗಳನ್ನು ಅತ್ಯಂತ ಅಗ್ಗದ ಬೆಲೆಗಳಿಗೆ ಖರೀದಿಸಬಹುದು.

ಬಿಗ್ ಬಝಾರ್ ತನ್ನ 12ನೆ ವರ್ಷದ ‘ಸಬ್ ಸೆ ಸಸ್ತೆ 6 ದಿನ್’ ಅಡಿಯಲ್ಲಿ ಗ್ರಾಹಕರಿಗೆ ಮೆಗಾ ರಿಯಾಯಿತಿ ಮತ್ತು ಇನ್ನೂ ಅನೇಕ ಆ್ಯಡ್-ಆನ್‌ಗಳನ್ನು ನೀಡುತ್ತಿದೆ. ಜೊತೆಗೆ ಅಬ್ ಔರ್ ಭೀ ಸಸ್ತಾ (ಈಗ ಇನ್ನೂ ಅಗ್ಗ) ಕೂಡ ಇರಲಿದೆ! ಕೆಲವು ಪ್ರಥಮವೆನಿಸುವ ಕೊಡುಗೆಗಳೂ ಗ್ರಾಹಕರಿಗೆ ಈ ವೇಳೆ ಸಿಗಲಿವೆ. ಕೊಡುಗೆಯ ಅವಯಲ್ಲಿ ಆ್ಯಕ್ಸಿಸ್ ಬ್ಯಾಂಕ್ ಡೆಬಿಟ್/ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಶೇ.10 ಹೆಚ್ಚುವರಿ ರಿಯಾಯಿತಿಯೂ ಇದೆ.

ಈ ಕುರಿತಂತೆ ಮಾತನಾಡಿದ ಬಿಗ್ ಬಝಾರ್‌ನ ಸಿಇಒ ಸದಾಶಿವ್ ನಾಯಕ್, ನಮ್ಮ ಗ್ರಾಹಕರಿಗೆ ಅತ್ಯುತ್ತಮ ವೌಲ್ಯವನ್ನು ನೀಡಲು ಯತ್ನಿಸುತ್ತೇವೆ. ಇದು ಸಬ್ ಸೆಸಸ್ತೆ 6 ದಿನ್ 12ನೆ ವರ್ಷ. ಇದನ್ನು ಇನ್ನಷ್ಟು ವಿಶೇಷವಾಗಿಸುವ ಉದ್ದೇಶ ನಮ್ಮದು. ಈ ಬಾರಿ ತ್ವರಿತವಾಗಿ ಹೊರ ಹೋಗುವ ಆಯ್ಕೆಯಿದ್ದು ಗ್ರಾಹಕರು ಸಾಲು-ಸರತಿ, ಜನಜಂಗುಳಿಗಳಲ್ಲಿ ಹೆಣಗಬೇಕಿಲ್ಲ ಎಂದರು. ಈ ಬಾರಿ ಕೊಡುಗೆಯ ಅವಯಲ್ಲಿ ಗ್ರಾಹಕರು ಮುಂಚಿತವಾಗಿ ಆನ್‌ಲೈನ್‌ನಲ್ಲಿ ಪೇ-ಔಟ್ ಸ್ಲಾಟ್ ಕಾಯ್ದಿರಿಸುವ ಮೂಲಕ ಉದ್ದನೆಯ ಸಾಲುಗಳಲ್ಲಿ ನಿಲ್ಲುವ ಕಷ್ಟವನ್ನು ತಪ್ಪಿಸಿಕೊಳ್ಳಬಹುದು. ಇದಕ್ಕಾಗಿ ಡಿಡಿಡಿ.ಚಿಜಿಜಚಿಚ್ಢಚ್ಟ.್ಚಟಞ ಅನ್ನು ಸಂಪರ್ಕಿಸಬಹುದು. ನಮ್ಮ ಭಾಗಸ್ಥರಾದ ಪೇಟಿಎಂ, ್ಯೂಚರ್ ಪೇ ಮತ್ತು ಕೊರಿಯೊಗಳು ತಮ್ಮ ವತಿಯಿಂದ ಇನ್ನಷ್ಟು ಕೊಡುಗೆಗಳನ್ನೂ ಘೋಷಿಸಿದ್ದಾರೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

 * ಬಿಗ್ ಬಝಾರ್ ಪ್ಯೂಚರ್ ಗ್ರೂಪ್‌ನ ಹೈಪರ್‌ಮಾರ್ಕೆಟ್ ಚಿಲ್ಲರೆ ಸರಮಾಲೆಯ ಮುಕುಟಪ್ರಾಯ ಮಳಿಗೆ. ದೇಶದಾದ್ಯಂತ 100ಕ್ಕೂ ಅಕ ನಗರಗಳಲ್ಲಿ ಕಾರ್ಯಾಚರಿಸುತ್ತಿವೆ.

ಹೆಚ್ಚಿನ ಮಾಹಿತಿಗಾಗಿ ರಾಜೇಶ್ ರಾಣಾ ಕಾರ್ಪೊರೇಟ್ ಕಮ್ಯುನಿಕೇಷನ್ಸ್, ್ಯೂಚರ್ ಗ್ರೂಪ್ ಮೊ.: 8451804501 /7498274972. ಇಮೇಲ್: rajesh.rana@futuregroup.in ಅನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News