ಕ್ಯಾನ್ಸರ್ ವಿರುದ್ಧ ಜಾಗೃತಿ ಅಭಿಯಾನ ‘ಕ್ಯಾನ್ ಸರ್ವೈವ್’ಗೆ ನಾಳೆ ಚಾಲನೆ

Update: 2017-01-20 19:06 GMT

ಮಂಗಳೂರು, ಜ.20: ಫಾ.ಮುಲ್ಲರ್ ಮೆಡಿಕಲ್ ಹಾಸ್ಪಿಟಲ್‌ನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗವು ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವ ಮತ್ತು ಗುಣಪಡಿಸಬಹುದಾದ ಕ್ಯಾನ್ಸರ್ ಹೊಂದಿರುವ ರೋಗಿಗಳ ಚಿಕಿತ್ಸೆಗೆ ದೇಣಿಗೆ ಸಂಗ್ರಹಿಸುವ ಹಿನ್ನೆಲೆಯಲ್ಲಿ ‘ಕ್ಯಾನ್ ಸರ್ವೈವ್’ ಎಂಬ ಒಂದು ತಿಂಗಳ ವಿಶಿಷ್ಟ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ಡಾ.ವೈಟ್ ಪಿಂಟೋ ಹೇಳಿದರು.

ಶುಕ್ರವಾರ ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.22ರಿಂದ ೆ.11ರ ವರೆಗೆ ನಡೆಯುವ ಅಭಿಯಾನಕ್ಕೆ ಜ.22ರಂದು ಲ್ಯಾವೆಂಟರ್ ರಿಬ್ಬನ್ ಡ್ರೆವ್‌ನೊಂದಿಗೆ ಚಾಲನೆ ಸಿಗಲಿದೆ. ಗುಣಪಡಿಸಬಹುದಾದ ಕ್ಯಾನ್ಸರ್ ಹೊಂದಿರುವ ರೋಗಿಗಳಿಗೆ ಅರಿವು ಮತ್ತು ನೆರವಿನ ಸಂಕೇತವಾಗಿರುವ ಲ್ಯಾವೆಂಟರ್ ರಿಬ್ಬನ್‌ನ್ನು ಆಂದೋಲನದ ಭಾಗವಾಗಿ ರಿಬ್ಬನ್ ಧರಿಸಲಾಗುತ್ತದೆ. ೆ.3ರಂದು ಸೀ ಸೆವೆನ್ ಹಾಗೂ ಸ್ಪ್ಲಿಟ್‌ಫಿಂಗರ್ಸ್‌ ಬ್ಯಾಂಕ್‌ಗಳಿಂದ ಮೆಗಾ ಸಂಗೀತ ಹಾಗೂ ಮನೋರಂಜನಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇಲ್ಲಿ ಯುವರಾಜ್ ಸಿಂಗ್ ಆಟೋಗ್ರ್ಾ ನೀಡಿದ ವಸ್ತುಗಳ ಹರಾಜು ನಡೆತ್ತದೆ. ಖ್ಯಾತ ಕಲಾವಿದ ಡೆರ್ರೆನ್ ಮಸ್ಕರೇನಸ್ ಅವರ ಚಿತ್ರಗಳ ಹರಾಜು ಆಯೋಜಿಸಲಾಗಿದೆ.

ೆ.5ರಂದು ಬೆಳಗ್ಗೆ 6:15ಕ್ಕೆ ಅರಿವಿನ ಜಾಥಾ ಹೊರಡಲಿದ್ದು,ಫಾ.ಮುಲ್ಲರ್ ಮೆಡಿಕಲ್ ಕಾಲೇಜು ಕ್ರೀಡಾಂಗಣದಿಂದ 5 ಕಿ.ಮೀ. ಓಟ/ನಡಿಗೆ ಹಮ್ಮಿಕೊಳ್ಳಲಾಗಿದ್ದು, ಮಂಗಳೂರು ಸೂಪರ್‌ಬೈಕ್ಸ್ ಅಸೋಸಿಯೇಶನ್ ಇದಕ್ಕೆ ಚಾಲನೆ ನೀಡಲಿದೆ. ಕ್ಯಾನ್ಸರ್‌ನಿಂದ ಗುಣಮುಖರಾಗಿರುವವರು, ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್ ಪಟುಗಳು ಇದರಲ್ಲಿ ಭಾಗವಹಿಸುವರು. ಖ್ಯಾತ ಹಾಸ್ಯ ಕಲಾವಿದ ನವೀನ್ ರಿಚರ್ಡ್ಸ್ ‘ಲ್ಾ ಔಟ್ ಲೌಡ್’ ಹಾಸ್ಯಸಂಜೆ ಕಾರ್ಯಕ್ರಮವನ್ನು ೆ.11ರಂದು ಸಂಜೆ 7.30ರಿಂದ ಾ.ಮುಲ್ಲರ್ ಸಂಸ್ಥೆಯ ಅಕಾಡಮಿ ಹಾಲ್ ಸಭಾಗೃಹದಲ್ಲಿ ನಡೆಸಿಕೊಡಲಿದ್ದಾರೆ.

ಕಾರ್ಯಕ್ರಮದ ಮಾಲ್ ಪಾಲುದಾರ ಸಿಟಿ ಸೆಂಟರ್‌ನಲ್ಲಿ ಜ.26ರಂದು ಕ್ಯಾನ್ ಸರ್ವೈವ್ ಅಭಿಯಾನದ ಮಳಿಗೆಗಳಿಗೆ ಭೇಟಿ ನೀಡಬಹುದು. ಅಂದು ಯುವರಾಜ್ ಸಿಂಗ್ ಸ್ಮರಣಿಕೆಗಳ ಹರಾಜು, ್ರಂಟ್ ಲೈನ್ ಆಟೋಮೊಬೈಲ್ ರಾಯಲ್ ಎನ್‌ಫೀಲ್ಡ್ ಅವರಿಂದ ಬೈಕ್‌ರ್ಯಾಲಿ ಮತ್ತು ಇತರ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.

ಹೆಚ್ಚಿನ ಮಾಹಿತಿಗಾಗಿ www.cansurvive.org.in ನ್ನು ಸಂಪರ್ಕಿಸಬಹುದು ಎಂದವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಡಾ.ರೋಹಿತ್ ಪಿಂಟೊ, ೆರ್‌ವಿಂಡ್ಸ್‌ನ ನಿರ್ದೇಶಕ ಇ. ೆರ್ನಾಂಡಿಸ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News