ಸಂತೋಷ್ ಕೊಲೆಪ್ರಕರಣ: ಆರು ಸಿಪಿಎಂ ಕಾರ್ಯಕರ್ತರ ಬಂಧನ
Update: 2017-01-21 15:50 IST
ಕಣ್ಣೂರ್, ಜ.21: ಬಿಜೆಪಿ ಕಾರ್ಯಕರ್ತ ಅಂಡಲ್ಲೂರ್ ಸಂತೋಷ್ ಕೊಲೆಪ್ರಕರಣದಲ್ಲಿ ಆರು ಮಂದಿ ಸಿಪಿಎಂ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಧರ್ಮಡಂದ ಮಿಥುನ್, ರೋಹಿತ್ ,ಪ್ರಜುಲ್,ಶಮೀಂ, ಅಜೇಶ್, ರಿಜೇಶ್ ಬಂಧಿಸಲಾದ ಆರೋಪಿಗಳು. ಪಾನೂರ್ ಸರ್ಕಲ್ ಇನ್ಸ್‌ಪೆಕ್ಟರ್ ಫಿಲಿಪ್‌ರ ನೇತೃತ್ವದಲ್ಲಿ ವಿಶೇಷ ಸ್ಕ್ವಾಡ್ ಬಂಧಿಸಿದ್ದು, ಈ ಹಿಂದೆಯೇ ಇವರನ್ನು ಬಿಜೆಪಿ ಕಾರ್ಯಕರ್ತ ರಜೀಶ್‌ನ ದೂರಿನಲ್ಲಿ ಪೊಲೀಸರು ಕಸ್ಟಡಿಗೆ ಪಡೆದಿದ್ದರು ಎಂದು ವರದಿಯಾಗಿದೆ.
ಬುಧವಾರ ರಾತ್ರಿ ಹತ್ತೂವರೆಗಂಟೆಗೆ ಸಂತೋಷ್‌ರಿಗೆ ಇರಿತವಾಗಿತ್ತು. ನೆರೆಯವರು ಮತ್ತು ಪೊಲೀಸರು ಅವರನ್ನು ತಲಶ್ಶೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅವರು ಆಸ್ಪತ್ರೆಯಲ್ಲಿ ಅಸುನೀಗಿದ್ದರು ಎಂದು ವರದಿತಿಳಿಸಿದೆ.