×
Ad

ಹಳಿ ತಪ್ಪಿದ ರಾನಿಖೇತ್ ಎಕ್ಸಪ್ರೆಸ್

Update: 2017-01-21 17:54 IST

ಜೈಪುರ,ಜ.21: ಶುಕ್ರವಾರ ತಡರಾತ್ರಿ ಜೈಸಲ್ಮೇರ್ ಬಳಿ ರಾನಿಖೇತ್ ಎಕ್ಸಪ್ರೆಸ್ ರೈಲಿನ ಹತ್ತು ಬೋಗಿಗಳು ಹಳಿ ತಪ್ಪಿದ್ದು, ಈ ಅವಘಡದಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ.

ಕಥ್ ಗೋದಾಮ್‌ನಿಂದ ಜೈಸಲ್ಮೇರ್‌ಗೆ ಪ್ರಯಾಣಿಸುತ್ತಿದ್ದ ಈ ರೈಲು ರಾತ್ರಿ 11.16ಕ್ಕೆ ಥಯಾತ್-ಜೈಸಲ್ಮೇರ್ ನಡುವೆ ಹಳಿ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದರು.

 ಪ್ರಯಾಣಿಕರು ವಿಶೇಷ ರೈಲಿನಲ್ಲಿ ತಮ್ಮ ಪ್ರಯಾಣ ಮುಂದುವರಿಸಿದರು. ಹಿರಿಯ ಅಧಿಕಾರಿಗಳು ಸ್ಥಳ್ಕಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅವಘಡಕ್ಕೆ ನಿಖರ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲವಾದರೂ ಹಳಿಯಲ್ಲಿನ ದೋಷ ಕಾರಣವಾಗಿರುವಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ರೈಲ್ವೆ ವಕ್ತಾರ ತರುಣ್ ಜೈನ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News