ನೂತನ ರಕ್ಷಣಾ ಕಾರ್ಯದರ್ಶಿಯಾಗಿ ಜೇಮ್ಸ್ ಮ್ಯಾಟಿಸ್ : ಸೆನೆಟ್ ಅನುಮೋದನೆ

Update: 2017-01-21 14:28 GMT

ವಾಶಿಂಗ್ಟನ್, ಜ. 21: ಅಮೆರಿಕದ ನೂತನ ರಕ್ಷಣಾ ಕಾರ್ಯದರ್ಶಿಯಾಗಿ ನಿವೃತ್ತ ಮರೀನ್ ಜನರಲ್ ಜೇಮ್ಸ್ ಮ್ಯಾಟಿಸ್‌ರನ್ನು ನೇಮಿಸುವ ಪ್ರಸ್ತಾಪಕ್ಕೆ ಅಮೆರಿಕದ ಸೆನೆಟ್ ಶುಕ್ರವಾರ ಅನುಮೋದನೆ ನೀಡಿದೆ.

ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಿದ ಬಳಿಕ ಸೆನೆಟರ್‌ಗಳು ತೆಗೆದುಕೊಂಡ ಪ್ರಥಮ ನಿರ್ಧಾರ ಇದಾಗಿದೆ. ಈ ನಿರ್ಧಾರವು 98-1 ಮತಗಳ ಅಂತರದಿಂದ ಅನುಮೋದನೆಯಾಗಿದೆ.

ಅಮೆರಿಕದ ಸೇನೆಯಲ್ಲಿ ಹಿರಿಯ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದವರು ನಿವೃತ್ತಿ ಹೊಂದಿದ ಏಳು ವರ್ಷಗಳ ಬಳಿಕವಷ್ಟೇ ರಾಜಕೀಯಕ್ಕೆ ಸೇರಲು ಅರ್ಹತೆ ಗಳಿಸುವ ನಿರ್ಬಂಧವೊಂದು ಮ್ಯಾಟಿಸ್‌ಗೆ ಅನ್ವಯವಾಗದಂತೆ ತಡೆಯುವ ನಿರ್ಣಯವೊಂದನ್ನು ಇದಕ್ಕೂ ಮೊದಲು ಸೆನೆಟ್ ಅಂಗೀಕರಿಸಿತ್ತು.

ಮ್ಯಾಟಿಸ್ 2013ರಲ್ಲಿ ನಿವೃತ್ತಿ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News