ಉತ್ತರಪ್ರದೇಶ: ಮೊದಲ ನಾಮಪತ್ರ ಸಲ್ಲಿಸಿದ ವಿಶೇಷ ಅಭ್ಯರ್ಥಿ
Update: 2017-01-22 14:59 IST
ಮಥುರಾ, ಜ. 22: ಉತ್ತರಪ್ರದೇಶದ 17ನೆ ವಿಧಾನಸಭಾ ಚುನಾವಣೆಗೆ ಪ್ರಪ್ರಥಮ ನಾಮಪತ್ರವನ್ನು ಮಥುರಾದ ಪಕ್ಕಡ್ ಬಾಬಾ ಸಲ್ಲಿಸಿ ಎಲ್ಲರನ್ನೂ ಹುಬ್ಬೇರಿಸಿದ್ದಾರೆ.
ಚುನಾವಣೆಯ ಮೊದಲ ಚರಣದ ಅಧಿಸೂಚನೆ ಹೊರಡಿಸಲಾದಂತೆ ಪಕ್ಕಡ್ ಬಾಬಾ ಬೆಂಬಲಿಗರೊಂದಿಗೆ ಬಂದು ನಾಮಪತ್ರ ಸಲ್ಲಿಸಿದರು. ಮಥುರಾ ಜಿಲ್ಲಾಧಿಕಾರಿ ನಿತಿನ್ ಬನ್ಸಾಲ್ ಪಕ್ಕಡ್ ಬಾಬಾ ಹೆಸರಲ್ಲಿ ಪಕ್ಷೇತರ ಅಭ್ಯರ್ಥಿಯ ನಾಮಪತ್ರ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಬನ್ಸಾಲ್‌ರು ಹೇಳುವ ಪ್ರಕಾರ ಈಹಿಂದೆ ಪಕ್ಕಡ್ ಬಾಬಾ ರಾಷ್ಟ್ರಪತಿ, ಸಂಸತ್, ಶಾಸಕರ ಸ್ಥಾನಗಳಲ್ಲಿ ನಾಮಪತ್ರ ಸಲ್ಲಿಸಿ ಗಮನಸೆಳೆದಿದ್ದರು. ವರು 16 ಬಾರಿ ವಿವಿಧ ಸ್ಥಾನಗಳಿಗೆ ಸ್ಪರ್ಧಿಸಲು ನಾಮಪತ್ರಸಲ್ಲಿಸಿದ್ದಾರೆ.
ರಾಜ್ಯ ಚುನಾವಣಾ ಮುಖ್ಯಕಾರ್ಯಾಲಯದ ಮೂಲಗಳು ಮಥುರಾ ವಿಧಾನಸಭಾಕ್ಷೇತ್ರದಿಂದ ಮಾತ್ರ ಈವರೆಗೆ ನಾಮಪತ್ರ ಸಲ್ಲಿಕೆಯಾಗಿದೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ.