ಜಲ್ಲಿಕಟ್ಟು ಕ್ರೀಡೆ: ಇಬ್ಬರು ಸಾವು

Update: 2017-01-22 10:42 GMT

ಚೆನ್ನೈ, ಜ.22: ತಮಿಳುನಾಡು ಸರಕಾರ ಆಯೋಜಿಸಿದ್ದ ಜಲ್ಲಿಕಟ್ಟು ಕ್ರೀಡೆಯ ವೇಳೆ ಗೂಳಿ ತಿವಿದು ಇಬ್ಬರು ಸಾವನ್ನಪ್ಪಿದ್ದರೆ, 15 ಜನರು ಗಾಯಗೊಂಡಿರುವ ಘಟನೆ ರವಿವಾರ ನಡೆದಿದೆ.

ಪುದುಕೊಟ್ಡೆ ಜಿಲ್ಲೆಯ ರಾಕೊಸಲ್ ಗ್ರಾಮದಲ್ಲಿ ತಮಿಳುನಾಡು ಸರಕಾರ ಆಯೋಜಿಸಿದ್ದ ಜಲ್ಲಿಕಟ್ಟು ಕ್ರೀಡೆಯಲ್ಲಿ ಈ ಅಹಿತಕರ ಘಟನೆ ನಡೆದಿದೆ. ಜಲ್ಲಿಕಟ್ಟು ಕ್ರೀಡೆಯನ್ನು ಸಚಿವ ಭಾಸ್ಕರ್ ಉದ್ಘಾಟಿಸಿದ್ದರು.

 ಜಲ್ಲಿಕಟ್ಟು ವೇಳೆ ಮೋಹನ್ ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇನ್ನೋರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಲ್ಲಿಕಟ್ಟು ಕ್ರೀಡೆಯಲ್ಲಿ ಯುವಕರು ಮದವೇರಿದ ಗೂಳಿಯನ್ನು ಪಳಗಿಸಬೇಕಾಗುತ್ತದೆ. ಗೂಳಿ ಮೂರು ಬಾರಿ ಜಿಗಿದಾಗಲೂ ಅದರ ಭುಜವನ್ನು ಹಿಡಿದುಕೊಂಡಿರುವ ವ್ಯಕ್ತಿ ಜಯಶಾಲಿಯಾಗುತ್ತಾನೆ.

2014ರಲ್ಲಿ ಸುಪ್ರೀಂಕೋರ್ಟ್ ಜಲ್ಲಿಕಟ್ಟು ಆಚರಣೆಗೆ ನಿಷೇಧ ಹೇರಿತ್ತು. ಈ ಬಾರಿ ಜಲ್ಲಿಕಟ್ಟು ಆಚರಣೆಗೆ ಅವಕಾಶ ನೀಡಲೇಬೇಕೆಂದು ತಮಿಳುನಾಡಿನ ಜನತೆ ಭಾರೀ ಪ್ರತಿಭಟನೆ ನಡೆಸಿದ್ದರು. ಜಲ್ಲಿಕಟ್ಟು ಪಟ್ಟಿಗೆ ಮಣಿದ ಕೇಂದ್ರ ಸರಕಾರ ಶುಕ್ರವಾರ ಸಂಜೆ ತಮಿಳುನಾಡು ಸರಕಾರಕ್ಕೆ ಸುಗ್ರೀವಾಜ್ಞೆ ಹೊರಡಿಸಲು ಸೂಚನೆ ನೀಡಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News