×
Ad

ತನ್ನ ಭಾರತೀಯ ತಂದೆಯನ್ನು ಹುಡುಕುತ್ತಾ ಬಂದಿರುವ ಬೆಲ್ಜಿಯಂನ ಯುವತಿ

Update: 2017-01-22 16:42 IST

ತೃಶೂರ್,ಜ.22: ಬೆಲ್ಜಿಯಂ ಪ್ರಜೆ ಸುನೀತಾ ಮೆಂಟೊರಿಯೊ ತನ್ನ ತಂದೆ ಮುಂಡಕ್ಕಯಂ ವಿಜಯ್ ಹೊಟೇಲ್‌ನಲ್ಲಿ ಪೊರೋಟ ಮಾಡುವ ಕೆಲಸ ಮಾಡುತ್ತಿದ್ದ ಚೆಲ್ಲಪ್ಪರನ್ನು ಹುಡುಕುತ್ತಾ ಕೇರಳಕ್ಕೆ ಬಂದಿದ್ದಾರೆ.

ಎರಡು ವರ್ಷಗಳಿದ್ದಾಗ ಸುನೀತಾರ ತಂದೆ ತಾಯಿ ಅವರನ್ನು ಎರ್ನಾಕುಲಂ ಸೈಂಟ್ ತೆರೆಸಾ ಅನಾಥಾಲಯದಲ್ಲಿ ಬಿಟ್ಟು ಹೋಗಿದ್ದರು. ಬೆಲ್ಜಿಯಂನ ದಂಪತಿ ಸುನೀತಾರನ್ನು ದತ್ತಪಡೆದು ಸ್ವದೇಶಕ್ಕೆ ಕರೆದುಕೊಂಡು ಹೋಗಿದ್ದರು.

1971ರ ಜನವರಿ 7ಕ್ಕೆ ಸುನೀತಾ ಜನಿಸಿದ್ದರು. 1981ರಲ್ಲಿ ಬೆಲ್ಜಿಯಂ ದಂಪತಿ ದತ್ತು ಪಡೆದು ಅಲ್ಲಿಗೆ ಕರೆದುಕೊಂಡು ಹೋದ ಬಳಿಕ ಸುನೀತಾ 2011ರಲ್ಲಿ ಕೇರಳಕ್ಕೆ ಬಂದು ತನ್ನ ತಾಯಿಯನ್ನು ಕಂಡು ಹುಡುಕಿದ್ದರು. ಮಲಸಹೋದರಿಯೊಂದಿಗೆ ವಾಸವಾಗಿದ್ದ ತಾಯಿ ತಂದೆಯ ಕುರಿತು ಹೆಚ್ಚಿನ ವಿವರ ನೀಡಿರಲಿಲ್ಲ.

ಹೆಚ್ಚು ಒತ್ತಾಯಿಸಿದಾಗ ಮುಂಡಕ್ಕಯಂ ವಿಜಯ್ ಹೊಟೇಲ್‌ನ ಮಾಹಿತಿಯನ್ನಷ್ಟೇ ನೀಡಿದ್ದರು.ಶುಕ್ರವಾರ ತೃಶೂರಿಗೆ ಬಂದಿರುವ ಸುನೀತಾರಿಗೆ ಫೇಸ್‌ಬುಕ್‌ನಲ್ಲಿ ಪರಿಚಿತರಾದ ಕೊಡುಗಂಲ್ಲೂರಿನ ವಿನೋದ್ ಹಾಗೂ ಪತ್ನಿ ನೀನು ಸಹಾಯ ಮಾಡುತ್ತಿದ್ದಾರೆ.

ಮೂರು ತಿಂಗಳವರೆಗೆ ಭಾರತದಲ್ಲಿ ಉಳಿದುಕೊಳ್ಳಲಿರುವ ಅವರು ಅಷ್ಟರಲ್ಲಿ ತಂದೆಯನ್ನು ಕಂಡು ಹುಡುಕಿ ಭೇಟಿಯಾಗಬೇಕೆಂಬ ಅದಮ್ಯ ಆಸೆಯನ್ನು ಹೊಂದಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News