ಮೂರನೆ ಏಕದಿನ: ಇಂಗ್ಲೆಂಡ್ 8 ವಿಕೆಟ್ ನಷ್ಟಕ್ಕೆ 321 ರನ್

Update: 2017-01-22 11:50 GMT

  ಕೋಲ್ಕತಾ, ಜ.22: ಆರಂಭಿಕ ಆಟಗಾರ ಜೇಸನ್ ರಾಯ್(65), ಬೈರ್‌ಸ್ಟೋವ್(56) ಹಾಗೂ ಬೆನ್‌ಸ್ಟೋಕ್ಸ್(ಅಜೇಯ 57)ಬಾರಿಸಿದ ಅರ್ಧಶತಕದ ಬೆಂಬಲದಿಂದ ಇಂಗ್ಲೆಂಡ್ ತಂಡ ರವಿವಾರ ಇಲ್ಲಿ ನಡೆದ ಭಾರತದ ವಿರುದ್ಧದ ಮೂರನೆ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 321 ರನ್ ಕಲೆ ಹಾಕಿದೆ.

ಟಾಸ್ ಜಯಿಸಿದ ಭಾರತದ ನಾಯಕ ವಿರಾಟ್ ಕೊಹ್ಲಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ಈಡನ್‌ಗಾರ್ಡನ್ಸ್ ಸ್ಟೇಡಿಯಂನಲ್ಲಿ ಮೊದಲ ವಿಕೆಟ್‌ಗೆ 98 ರನ್ ಜೊತೆಯಾಟ ನಡೆಸಿದ ರಾಯ್ ಹಾಗೂ ಬಿಲ್ಲಿಂಗ್ಸ್(35) ಇಂಗ್ಲೆಂಡ್‌ಗೆ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು.

ಈ ಇಬ್ಬರು ಔಟಾದ ಬಳಿಕ 3ನೆ ವಿಕೆಟ್‌ಗೆ 84 ರನ್ ಜೊತೆಯಾಟ ನಡೆಸಿದ ನಾಯಕ ಇಯಾನ್ ಮೊರ್ಗನ್(43) ಹಾಗೂ ಬೈರ್‌ಸ್ಟೋವ್ ತಂಡವನ್ನು ಅಗ್ರ ಕ್ರಮಾಂಕದಲ್ಲಿ ಆಧರಿಸಿದರು.

7ನೆ ವಿಕೆಟ್‌ಗೆ 73 ರನ್ ಸೇರಿಸಿದ ಸ್ಟೋಕ್ಸ್(ಅಜೇಯ 57, 39 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ವೋಕ್ಸ್(34) ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು.

ಭಾರತದ ಪರ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ(3-49) ಹಾಗೂ ರವೀಂದ್ರ ಜಡೇಜ(2-62) ಐದು ವಿಕೆಟ್‌ಗಳನ್ನು ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News