ಕೊಂಕಣಿ ಕಲಾವಿದ, ಸಾಹಿತಿಗಳ ಸಂಘಟನೆ ‘ನಕ್ತಿರಾಂ’ ಉದ್ಘಾಟನೆ

Update: 2017-01-22 18:38 GMT

ಮಂಗಳೂರು, ಜ.22: ಕೊಂಕಣಿ ಕಲಾಕಾರ್ ಮತ್ತು ಸಾಹಿತಿಗಳ ನೂತನ ಸಂಘಟನೆ ‘ನಕ್ತಿರಾಂ’ ಅನ್ನು ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರೋಯ್ ಕಾಸ್ತಲಿನೊ ಇತ್ತೀಚೆಗೆ ಡಾನ್‌ಬಾಸ್ಕೊ ಹಾಲ್‌ನಲ್ಲಿ ಉದ್ಘಾಟಿಸಿದರು.

ನಕ್ತಿರಾಂ ಸದಸ್ಯರಾಗಲು ಕಲಾವಿದರು ಸಾಹಿತಿಗಳು ತಮ್ಮ ಸ್ವಂತ ಪರಿಚಯ ಪತ್ರ, ಎರಡು ಭಾವಚಿತ್ರವನ್ನು ಕೊಂಕಣಿ ಅಕಾಡಮಿಗೆ ನೀಡಿ ಗುರುತು ಪತ್ರ ಪಡೆಯಬೇಕು. ಈಗಾಗಲೇ 250 ಕಲಾವಿದರು ಹಾಗೂ ಕಲಾವಿದರು ಗುರುತು ಪತ್ರ ಪಡೆದಿದ್ದಾರೆ ಎಂದರು.

ಕೊಂಕಣಿ ಅಕಾಡಮಿಯ ರಿಜಿಸ್ಟಾರ್ ಡಾ. ದೇವದಾಸ್ ಪೈಯವರು ಮಾತನಾಡಿ, ಸರಕಾರದಿಂದ ಕಲಾವಿದರು ಹಾಗೂ ಸಾಹಿತಿಗಳಿಗೆ ಸಂಬಂಸಿದಂತೆ ವಿವಿಧ ಸವಲತ್ತುಗಳನ್ನು ಪಡೆಯಲು ಮತ್ತು ಇತರ ಮಾಸಾಶನ ಪಡೆಯಲು ಇರುವ ನಿಯಮಗಳ ಕುರಿತು ಮಾಹಿತಿ ನೀಡಿದರು. ಸಂಚಾಲಕ ಡೊಲಾ ಮಂಗಳೂರು ಸ್ವಾಗತಿಸಿದರು. ಡೊಲಿ ಸಲ್ಡಾನ್ಹಾ ವಂದಿಸಿದರು. ರೇಮಂಡ್ ಡಿಕುನ್ಹ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News