ಪುತ್ತೂರು ನಗರಸಭೆ: ಕಾಂಗ್ರೆಸ್ ಉಚ್ಚಾಟಿತ ಸದಸ್ಯರ ಮರು ಸೇರ್ಪಡೆ

Update: 2017-01-22 18:40 GMT

ಪುತ್ತೂರು, ಜ.22: ನಗರಸಭೆಯಲ್ಲಿ ತೆರವಾಗಿರುವ 6 ಸ್ಥಾನಗಳಿಗೆ ಉಪಚುನಾವಣೆ ನಿಗದಿಯಾದ ಬೆನ್ನಲ್ಲೇ ಪಕ್ಷದ ವಿಪ್ ಉಲ್ಲಂಸಿದ ಆರೋಪದ ಹಿನ್ನೆಲೆಯಲ್ಲಿ ಪಕ್ಷದಿಂದ ಉಚ್ಚಾಟಿತರಾಗಿದ್ದ ನಗರಸಭೆಯ ಮಾಜಿ ಅಧ್ಯಕ್ಷರ ಸಹಿತ 6 ಮಂದಿಯನ್ನು ಪಕ್ಷಕ್ಕೆ ಮರುಸೇರ್ಪಡೆಗೊಳಿಸಲು ಜಿಲ್ಲಾಧ್ಯಕ್ಷ ರಮಾನಾಥ ರೈ ತೀರ್ಮಾನಿಸಿದ್ದಾರೆ.

ಈ ಹಿಂದೆ ಪಕ್ಷದ ವಿಪ್ ಉಲ್ಲಂಸಿ ಉಚ್ಚಾಟಿತರಾಗಿದ್ದ ನಗರಸಭೆಯ ಮಾಜಿ ಅಧ್ಯಕ್ಷ ಜಗದೀಶ್ ನೆಲ್ಲಿಕಟ್ಟೆ, ಮಾಜಿ ಸದಸ್ಯರಾದ ಸೀಮಾ ಗಂಗಾಧರ್, ದೀಕ್ಷಾ ಪೈ, ರೇಖಾ ಯಶೋಧರ್, ಕಮಲಾ ಆನಂದ್ ಮತ್ತು ನವೀನ್ ಚಂದ್ರ ನಾಯ್ಕೆ ಪಕ್ಷಕ್ಕೆ ಮರು ಸೇರ್ಪಡೆಗೊಂಡವರು. ಈ ಹಿಂದೆ ನಗರಸಭೆ ಅಧ್ಯಕ್ಷರ ಆಯ್ಕೆ ಸಂದರ್ಭ ಬಹುಮತ ಹೊಂದಿದ್ದ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಪಕ್ಷವು ಅಕೃತ ಅಭ್ಯರ್ಥಿಯಾಗಿ ಮುಹಮ್ಮದ್ ಅಲಿ ಅವರನ್ನು ಆಯ್ಕೆ ಮಾಡಿತ್ತು. ಅವರಿಗೆ ಬೆಂಬಲ ಸೂಚಿಸುವಂತೆ ಪಕ್ಷವು ಎಲ್ಲ ಸದಸ್ಯರಿಗೆ ವಿಪ್ ಜಾರಿಗೊಳಿಸಿತ್ತು. ಆದರೆ ಈ ವೇಳೆ ಸದಸ್ಯ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಅವರು ಬಂಡಾಯವಾಗಿ ಬಿಜೆಪಿ ಬೆಂಬಲದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್ ಸದಸ್ಯರಾಗಿದ್ದ ಸೀಮಾ ಗಂಗಾಧರ್, ದೀಕ್ಷಾ ಪೈ, ರೇಖಾ ಯಶೋಧರ್, ಕಮಲಾ ಆನಂದ್ ಮತ್ತು ನವೀನ್ ಚಂದ್ರ ನಾಯ್ಕೆ ಅವರು ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಅವರನ್ನು ಬೆಂಬಲಿಸಿದ್ದರು. ಅಧ್ಯಕ್ಷ ಚುನಾವಣೆಯಲ್ಲಿ ಪರಾಜಿತರಾಗಿದ್ದ ಮುಹಮ್ಮದ್ ಅಲಿ ಅವರು ಜಗದೀಶ್ ನೆಲ್ಲಿಕಟ್ಟೆ ಹಾಗೂ ಅವರನ್ನು ಬೆಂಬಲಿಸಿದ್ದ 5 ಮಂದಿ ಸದಸ್ಯರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಜಿಲ್ಲಾಕಾರಿಗಳ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾಕಾರಿಗಳ ನ್ಯಾಯಾಲಯ ಅಧ್ಯಕ್ಷರು ಸೇರಿದಂತೆ 6 ಮಂದಿಯ ಸದಸ್ಯತ್ವವನ್ನು ಅನರ್ಹಗೊಳಿಸಿ ಆದೇಶಿಸಿತ್ತು.

ಜಿಲ್ಲಾಕಾರಿಗಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಜಗದೀಶ್ ನೆಲ್ಲಿಕಟ್ಟೆ ಮತ್ತು ಇತರ 5 ಮಂದಿ ಸದಸ್ಯರು ಹೈಕೋರ್ಟ್‌ಗೆ ರಿಟ್ ಸಲ್ಲಿಸಿದ್ದರು.

ಒಂದೊಮ್ಮೆ ತೀರ್ಪಿಗೆ ತಡೆಯಾಜ್ಞೆ ನೀಡಿದ್ದ ಹೈಕೋರ್ಟ್ ಬಳಿಕ ವಿಚಾರಣೆ ಪೂರ್ಣಗೊಳಿಸಿ ಜಿಲ್ಲಾಕಾರಿಗಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿತ್ತು. ಇದರಿಂದಾಗಿ ಎಲ್ಲ 6 ಮಂದಿಯ ಸದಸ್ಯತ್ವ ರದ್ದುಗೊಂಡಿತ್ತು. ಇದೀಗ ಈ 6 ಸ್ಥಾನಗಳಿಗೆ ೆ.12ರಂದು ಚುನಾವಣೆ ನಿಗದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News