​‘ನೋಟ್ 7’ಗೆ ಬೆಂಕಿ ಹತ್ತಲು ಬ್ಯಾಟರಿ ಕಾರಣ: ಸ್ಯಾಮ್ಸಂಗ್

Update: 2017-01-23 14:37 GMT

 ಸಿಯೋಲ್ (ದಕ್ಷಿಣ ಕೊರಿಯ), ಜ. 23: ತನ್ನ ಮಹತ್ವಾಕಾಂಕ್ಷೆಯ ಉತ್ಪನ್ನ ‘ಗೆಲಾಕ್ಸಿ ನೋಟ್ 7’ ಮೊಬೈಲ್ ಫೋನ್‌ಗಳಿಗೆ ಬೆಂಕಿ ಹತ್ತಲು ಅದರ ದೋಷಪೂರಿತ ಬ್ಯಾಟರಿಗಳು ಕಾರಣ ಎಂದು ಜಗತ್ತಿನ ಅತ್ಯಂತ ದೊಡ್ಡ ಸ್ಮಾರ್ಟ್‌ಫೋನ್ ಉತ್ಪಾದಕ ಸ್ಯಾಮ್ಸಂಗ್ ಸೋಮವಾರ ಹೇಳಿದೆ.

ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಬಿಡುಗಡೆಯಾದ ಗೆಲಾಕ್ಸಿ ನೋಟ್ 7 ಫೋನ್‌ಗಳನ್ನು ಕಂಪೆನಿಯು ಹಿಂದಕ್ಕೆ ಪಡೆಯಬೇಕಾಗಿ ಬಂದಿತ್ತು.
‘‘ನೋಟ್ 7 ಮೊಬೈಲ್‌ಗಳಲ್ಲಿ ಬೆಂಕಿ ಹತ್ತಿಕೊಂಡಿರುವುದಕ್ಕೆ ಬ್ಯಾಟರಿಗಳೇ ಕಾರಣ ಎನ್ನುವುದು ಆಂತರಿಕ ಮತ್ತು ಸ್ವತಂತ್ರ ತನಿಖೆಗಳಿಂದ ಕಂಡುಬಂದಿದೆ’’ ಎಂದು ದಕ್ಷಿಣ ಕೊರಿಯದ ಕಂಪೆನಿ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಮೂಲ ಫೋನ್‌ಗಳನ್ನು ಹಿಂದಕ್ಕೆ ಪಡೆದುಕೊಂಡು ನೀಡಲಾದ ಬದಲಿ ಫೋನ್‌ಗಳಿಗೂ ಬೆಂಕಿ ಹತ್ತಿಕೊಂಡಿದ್ದು ಆಘಾತಕ್ಕೆ ಕಾರಣವಾಗಿತ್ತು. ಅಂತಿಮವಾಗಿ ಸ್ಯಾಮ್ಸಂಗ್ ಗೆಲಾಕ್ಸಿ ನೋಟ್ 7 ಯೋಜನೆಯನ್ನೇ ಕೈಬಿಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News