ನೇತಾಜಿ ಕಣ್ಮರೆಯ ಹಿಂದಿನ ಸತ್ಯ ಬೆಳಕಿಗೆ ಬರಲಿ: ಮಮತಾ

Update: 2017-01-23 18:17 GMT

ಡಾರ್ಜಿಲಿಂಗ್,ಜ.23: ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ನಿಗೂಢ ನಾಪತ್ತೆ ಪ್ರಕರಣದ ಕುರಿತ ಸತ್ಯವು ಹೊರಬರಬೇಕೆಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಆಗ್ರಹಿಸಿದ್ದಾರೆ. ನೇತಾಜಿ ಜನ್ಮದಿನಾಚರಣೆಯ ಅಂಗವಾಗಿ ಡಾರ್ಜಿಲಿಂಗ್‌ನಲ್ಲಿ ಆಯೋಜಿಸಲಾದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು ನೇತಾಜಿಯವರ ಜನ್ಮದಿನಾಚರಣೆಯನ್ನು ನಾವು ಪ್ರತಿ ವರ್ಷವೂ ಆಚರಿಸುತ್ತಿದ್ದೇವೆ. ಆದರೆ ಅವರ ಕಣ್ಮರೆಯ ಬಗ್ಗೆ ಏನೂ ತಿಳಿದಿಲ್ಲ. ಇದೊಂದು ದುರಂತ’’ ಎಂದು ವಿಷಾದಿಸಿದರು.

ರಾಜ್ಯ ಸರಕಾರದ ಬಳಿಯಿದ್ದ ನೇತಾಜಿಗೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಪಡಿಸಲಾಗಿದೆ. ಆದರೆ ಕೆಲವು ಕಡತಗಳು ಕೇಂದ್ರ ಸರಕಾರದ ವಶದಲ್ಲಿವೆ. ಒಂದು ವೇಳೆ ತನಿಖೆ ನಡೆದಲ್ಲಿ ಸತ್ಯವು ಹೊರಬರಬಹುದಿತ್ತು. ಆದರೆ ಹಾಗಾಗಲಿಲ್ಲ’’ ಎಂದರು.
‘‘ನೇತಾಜಿಯವರ ಜನ್ಮದಿನಾಚರಣೆಯು, ಸ್ವಾತಂತ್ರೋತ್ಸವ ಹಾಗೂ ಗಣರಾಜ್ಯೋತ್ಸವಗಳಂತೆಯೇ ಮಹತ್ವಪೂರ್ಣವಾದುದೆಂದು ಹೇಳಿದ ಮಮತಾ, ನೇತಾಜಿಯವರು ನೈಜ ರಾಷ್ಟ್ರನಾಯಕರಾಗಿದ್ದರು. ನಿಜವಾದ ನಾಯಕನು ಯಾರಿಗೂ ಭೇದ ಮಾಡದೆ, ಎಲ್ಲರಿಗಾಗಿ ದುಡಿಯುತ್ತಾನೆ’’ ಎಂದರು. ಯೋಜನಾ ಆಯೋಗವನ್ನು ರದ್ದುಪಡಿಸಿದ ಕೇಂದ್ರ ಸರಕಾರದ ನಿರ್ಧಾರವನ್ನು ಟೀಕಿಸಿದ ಅವರು ನೇತಾಜಿಯವರು ಸ್ವಾತಂತ್ರಕ್ಕೆ ಮೊದಲೇ ಯೋಜನಾ ಆಯೋಗದ ಬಗ್ಗೆ ಕಲ್ಪನೆಯನ್ನು ಹೊಂದಿದ್ದಾರೆಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News