'ಇನ್‌ಲ್ಯಾಂಡ್ ಎಪಿರಾನ್'ಗೆ ಜ.25ರಂದು ಶಿಲಾನ್ಯಾಸ

Update: 2017-01-23 18:39 GMT

ಮಂಗಳೂರು, ಜ.23: ಇನ್‌ಲ್ಯಾಂಡ್ ಸಂಸ್ಥೆಯ ನೂತನ ಐಶಾರಾಮಿ ವಸತಿ ಸಮುಚ್ಚಯ ‘ಇನ್‌ಲ್ಯಾಂಡ್ ಎಪಿರಾನ್’ಗೆ ಶಿಲಾನ್ಯಾಸ ಸಮಾರಂಭವು ಜ.25ರಂದು ಬೆಳಗ್ಗೆ 9 ಗಂಟೆಗೆ ನಗರದ ಹೃದಯ ಭಾಗದ ಕರಂಗಲ್ಪಾಡಿಯ ಸಮೀಪ ಪಿಂಟೋಸ್ ಲೇನ್‌ನಲ್ಲಿ ಸರ್ವಧರ್ಮ ಸಂಪ್ರದಾಯದಂತೆ ಧಾರ್ಮಿಕ ಗುರುಗಳಿಂದ ಪೂಜೆ, ದುಆ, ಪ್ರಾರ್ಥನೆಯೊಂದಿಗೆ ನೆರವೇರಲಿದೆ.

ಈ ವಸತಿ ಸಮುಚ್ಚಯವು 7 ಅಂತಸ್ತುಗಳನ್ನು ಹೊಂದಿದ್ದು, 2 ಬಿಎಚ್‌ಕೆ, 2 ಬಿಎಚ್‌ಕೆ+ ಸ್ಟಡಿ ರೂಮ್ ಹಾಗೂ 3 ಬಿಎಚ್‌ಕೆಗಳ 29 ಫ್ಲಾಟ್‌ಗಳನ್ನು ಹೊಂದಿರಲಿದೆ. ಸ್ಮಾರ್ಟ್ ಸಿಟಿಯಾಗಿ ದಾಪುಗಾಲಿ ಡುತ್ತಿರುವ ಮಂಗಳೂರಿಗೆ ಅತ್ಯಾಧುನಿಕ ವಿನ್ಯಾಸ, ಉನ್ನತ ಗುಣಮಟ್ಟ ಹಾಗೂ ಆಧುನಿಕ ಸವಲ ತ್ತುಗಳೊಂದಿಗೆ ನಿರ್ಮಾಣವಾಗಲಿದೆ. ನಿತ್ಯ ಜೀವ ನಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳು ಈ ಕಟ್ಟಡದ ಅನತಿ ದೂರದಲ್ಲಿದೆ.

ಇನ್‌ಲ್ಯಾಂಡ್ ಸಂಸ್ಥೆ ಮಂಗಳೂರು ಮಾತ್ರವ ಲ್ಲದೇ ಬೆಂಗಳೂರಿನಲ್ಲೂ ಅತ್ಯಂತ ವಿಶ್ವಸನೀಯ ರಿಯಲ್ ಎಸ್ಟೇಟ್ ಎಂಬ ಹೆಗ್ಗಳಿಕಗೆ ಪಾತ್ರವಾಗಿದೆ. ಬೆಂಗಳೂರಿನ ಯಲಹಂಕ ನ್ಯೂ ಟೌನ್‌ನಲ್ಲಿ 2 ಮತ್ತು 3 ಬಿಎಚ್‌ಕೆಗಳನ್ನು ಒಳಗೊಂಡ 116 ಫ್ಲಾಟ್‌ಗಳ ವಸತಿ ಸಮುಚ್ಚಯ ‘ಇನ್‌ಲ್ಯಾಂಡ್ ಎಡಿಲಾನ್’ನ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದೆ. ಸ್ವಿಮ್ಮಿಂಗ್ ಪೂಲ್, ಸ್ಪಾ, ಚಿಲ್ಡ್ರನ್ಸ್ ಪ್ಲೇ ಏರಿಯಾ, ಇನ್‌ಡೋರ್ಸ್‌ ಸ್ಪೋರ್ಟ್ಸ್ ಎರೆನಾ, ಸಿಸಿಟಿವಿ ಕ್ಯಾಮರಾ ಮೊದಲಾದ ಹಲವು ಅತ್ಯಾಧುನಿಕ ಸೌಲಭ್ಯಗಳನ್ನು ಈ ವಸತಿ ಸಮುಚ್ಚಯ ಹೊಂದಿದೆ.

ಇನ್‌ಲ್ಯಾಂಡ್ ಸಂಸ್ಥೆಯು ಉತ್ಕೃಷ್ಟ ಗುಣಮಟ್ಟಕ್ಕೆ ಸದಾ ಆದ್ಯತೆ ನೀಡುತ್ತಿದ್ದು, ಮುಂದೆಯು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ವೌಲ್ಯಾಧಾರಿತ ಸೇವೆ ಒದಗಿಸಲು ಟೀಮ್ ಇನ್‌ಲ್ಯಾಂಡ್ ಸದಾ ಬದ್ಧವಾಗಿರುತ್ತದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ www.inlandbuilders.net ನ್ನು ಸಂಪರ್ಕಿಸಬಹುದಾಗಿದೆ.

ವೈಶಿಷ್ಟತೆಗಳು

* ವಿಶಾಲವಾದ ಲಾಬಿ
* ಜಿಮ್ನಾಶಿಯಂ
* ಸ್ಟೀಮ್ ರೂಮ್
* ಸಿಸಿಟಿವಿ
* ಮಕ್ಕಳ ಆಟದ ತಾಣ
* ರೆಟಿಕ್ಯುಲೇಟೆಡ್ ಗ್ಯಾಸ್ ಸಂಪರ್ಕ
* ಸುಸಜ್ಜಿತ ಕಾರು ಪಾರ್ಕಿಂಗ್
* ವೀಡಿಯೊ ಡೋರ್ ಫೋನ್ ಸಿಸ್ಟಮ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News